Monday, October 3, 2022

ಸುಂದರ ಸುವ್ವಿ ಹಕ್ಕಿ

Follow Us

ಪರಿಚಿತರಿಗೆ ಸದ್ದಿನಿಂದಲೇ ವಿಶೇಷ ಭಾವ ಮೂಡಿಸುವ ಸುವ್ವಿ ಹಕ್ಕಿ ಗಾತ್ರದಲ್ಲಿ ಸಣ್ಣದು. ಕೀಟಾಹಾರಿ ಹಕ್ಕಿ. ಹಾರುವಾಗ ಸದ್ದು ಮಾಡುವುದು ಈ ಹಕ್ಕಿಯ ವಿಶೇಷ.

   ಪಕ್ಷಿನೋಟ 27   


♦ ಕಲ್ಗುಂಡಿ ನವೀನ್

ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರ: ಜಿ.ಎಸ್. ಶ್ರೀನಾ
newsics.com@gamil.com
ksn.bird@gmail.com


 ಮ್ಮ ಸುಂದರ, ಸಣ್ಣ ಗಾತ್ರದ ಹಕ್ಕಿಗಳಲ್ಲೊಂದು, ಈ ಸುವ್ವಿ ಹಕ್ಕಿ. ಪರಿಚಿತರಿಗೆ ಇದರ ಸದ್ದಿನಿಂದಲೇ ವಿಶೇಷ ಭಾವವನ್ನು ಮೂಡಿಸುತ್ತದೆ.
ಭಾರತ ಉಪಖಂಡ ಅಂದರೆ ಭಾರತ ನೇಪಾಳ, ಮಾಯನ್ಮಾರ್, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಕಂಡುಬರುವ ಇದು ಉಲಿಯಕ್ಕಿಯ ಒಂದು ಪ್ರಭೇದ (Warbler). ಹಾಗಾಗಿಯೇ ಇದನ್ನು Ashy wren warbler ಎಂದೂ ಕರೆಯುತ್ತಾರೆ. ಇತರ ಉಲಿಯಕ್ಕಿಗಳಂತೆ ಕೀಟಾಹಾರಿ ಹಕ್ಕಿಗಳು.
ಹಾರುವಾಗ ಸದ್ದು..!
ಈ ಹಕ್ಕಿಯ ಕುರಿತ ಒಂದು ಜಿಜ್ಞಾಸೆ ಇನ್ನೂ ಬಗೆಹರಿದಿಲ್ಲ. ಅದೇ ಅದು ಹಾರುವಾಗ ಹೊರಡಿಸುವ ಸದ್ದು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದು! ಕೆಲವರು ಅದು ಕೊಕ್ಕಿನಿಂದ ಹೊರಡಿಸುತ್ತದೆ ಎಂದರೆ, ಮತ್ತೆ ಕೆಲವರು ಅದು ಹಾರುವಾಗ ರೆಕ್ಕೆ ಬಾಲಕ್ಕೆ ತಗುಲಿ ಉಂಟಾಗುವ ಸದ್ದು ಎನ್ನುತ್ತಾರೆ. ಇದು ಗಂಟಲಿನಿಂದ ಹೊರಡಿಸುವ ಸದ್ದು ಎನ್ನುವ ವಾದವೂ ಇದೆ.
ನಮ್ಮ ನಗರ ಪ್ರದೇಶಗಳ ತೋಟಗಳಲ್ಲಿಯೂ ಸರ್ವೇಸಾಧಾರಣವಾಗಿ ಕಂಡುಬರುವ ಹಕ್ಕಿಯಿದು. ನೀವು ನೋಡಿ, ಹಾರುವಾಗ ಸದ್ದು ಹೇಗೆ ಬರುತ್ತದೆ ಎಂದು ಊಹಿಸಿ, ನಮಗೆ ಬರೆದು ತಿಳಿಸಿ.

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!