Monday, March 1, 2021

ಉದುರಿದ ಎಲೆಗಳು ಅಲ್ಲೇ ಇರಲಿ…

ಇದು ಎಲೆಗಳು ಉದುರಿರುವ ಸಮಯ. ಉದುರಿದ ಎಲೆಗಳನ್ನು ಅವು ಬಿದ್ದಲ್ಲಿಂದ ಚೆದುರಿಸದೆ ಹಾಗೆಯೇ ಕಾಪಾಡಿದರೆ ಮಣ್ಣಿನ ಆರೋಗ್ಯಕ್ಕೆ ಪೂರಕ. ಇದರಿಂದ ಮಳೆಗಾಲದಲ್ಲಿ ಮಣ್ಣು ಸವಕಳಿಯಾಗದಂತೆ ತಡೆಯುವುದರ ಜತೆಗೆ ಮಣ್ಣು ಹಾಗೂ ಮರಗಿಡಗಳಿಗೆ ಬೇಕಾದ ಪೋಷಕಾಂಶವೂ ಲಭ್ಯವಾಗುತ್ತದೆ.

   ಪರಿಸರ   

     ಮಣ್ಣಿನ ಆರೋಗ್ಯಕ್ಕೆ ಬೇಕು ಉದುರಿದ ಎಲೆಗಳು   


♦ ವಿಧಾತ್ರಿ
newsics.com@gmail.com


 ಗಿ ಡಮರಗಳು ಈಗ ಹೊಸದಾಗಿ ಮೈತುಂಬಿಕೊಳ್ಳುವ ಸಮಯ, ಹೀಗಾಗಿ, ಹಳೆಯ ಎಲೆಗಳನ್ನೆಲ್ಲ ಉದುರಿಸಿಕೊಂಡು ಬರಿದಾಗಿ ನಿಂತಿವೆ. ಎಲ್ಲಿ ಹೋದರೂ ಬಿಸಿಲ ಝಳ ಮೈಗೆ ತಾಕುತ್ತಿದೆ. ಹೌದು, ಬೇಸಿಗೆ ಮನೆಯಂಗಳಕ್ಕೆ ಬಂದೇ ಬಿಟ್ಟಿದೆ.
ಜಗತ್ತಿನಲ್ಲಿ ಯಾವುದಕ್ಕೇ ತಡೆಯಾದರೂ ಪ್ರಕೃತಿ ಮತ್ತು ಅದರೊಂದಿಗೆ ಕೃಷಿ ಕಾಯಕಕ್ಕೆ ಬ್ರೇಕ್ ಬೀಳುವುದಿಲ್ಲ. ಕಳೆದ ಲಾಕ್ ಡೌನ್ ಸಮಯದಲ್ಲಿ ಬೇರೆಲ್ಲ ಪ್ರಪಂಚ ಸ್ಥಗಿತವಾಗಿದ್ದರೂ ಕೃಷಿ ಕಾರ್ಯ ಮಾತ್ರ ಸಾಗುತ್ತಲೇ ಇತ್ತು. ಹಾಗೆಯೇ ಪ್ರಕೃತಿಯೂ. ಯಾವ ಸಮಯದಲ್ಲಿ ಏನಾಗಬೇಕೋ ಅದನ್ನು ಮಾಡುತ್ತಿರುತ್ತದೆ. ಹೀಗಾಗಿ, ಮರಗಿಡಗಳೆಲ್ಲ ಎಲೆ ಎದುರಿಸಿ ನಿಂತಿವೆ.
“ಪ್ರತಿಬಾರಿಯೂ ಮರಗಿಡಗಳು ಎಲೆ ಉದುರಿಸುತ್ತವೆ, ಯುಗಾದಿಯ ಸಮಯಕ್ಕೆ ಪ್ರಕೃತಿ ಮೈತುಂಬಿಕೊಂಡು ನಳನಳಿಸುತ್ತದೆ’ ಅದರಲ್ಲೇನು ಹೊಸತು? ಎನ್ನುವಂತಿಲ್ಲ. ಹಿಂದೆ ಆದದ್ದಾಯಿತು. ಈ ಬಾರಿ ನಾವು ಮಾಡಬೇಕಾದ ಕೆಲಸವೆಂದರೆ, ಉದುರಿದ ಎಲೆಗಳನ್ನು ಸಂರಕ್ಷಿಸುವುದು. ಅರ್ಥಾತ್ ಅಲ್ಲಿಯೇ ಬಿಡುವುದು.
ಬಹಳ ಕಡೆ ನೋಡಬಹುದು, ಉದುರಿದ ಎಲೆಗಳನ್ನೆಲ್ಲ ಸ್ವಚ್ಛ ಮಾಡಲಾಗುತ್ತದೆ. ಮಲೆನಾಡಿದ ಕಡೆ ಬೆಟ್ಟಗಳಲ್ಲಿ ಉದುರುದ ತರಗೆಲೆಗಳನ್ನು ತಂದು ಗೊಬ್ಬರ ಮಾಡಲಾಗುತ್ತದೆ. ಅಲ್ಲಿ, ಇಲ್ಲಿ ಎಂದಲ್ಲ. ಮರಗಳಿದ್ದರೆ, ಎಲೆಗಳು ಉದುರಿದ್ದರೆ ಅವುಗಳನ್ನು ಅಲ್ಲಿಯೇ ಉಳಿಸುವ ಕೆಲಸ ಮಾಡಬೇಕಿರುವುದು ಈ ಹೊತ್ತಿನ ಅನಿವಾರ್ಯ.
ಉದುರಿದ ಎಲೆಗಳು ನೆಲದಲ್ಲಿಯೇ ಇದ್ದರೆ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತೇನು? ಮಣ್ಣು ತಜ್ಞ ಸಾಯ್ಲ್ ವಾಸು ಅವರ ಪ್ರಕಾರ, ಮಣ್ಣಿನ ಆರೋಗ್ಯ ಕಾಪಾಡುವ ಜೀವಿಗಳಿಗೆ ಉದುರಿದ ಎಲೆಯೇ ಆಹಾರ. ಈ ನಿಟ್ಟಿನಲ್ಲಿ ಅವರು ಹಲವಾರು ಸಲಹೆಗಳನ್ನು ನೀಡಿದ್ದಾರೆ.
• ಒಣಗಿದ ಎಲೆ, ಹುಲ್ಲು, ಕಡ್ಡಿಗಳಲ್ಲಿ ಇಂಗಾಲದ ಅಂಶವಿರುತ್ತದೆ. ಇವು ಮಣ್ಣಲ್ಲಿ ಬೆರೆತುಹೋಗುವುದರಿಂದ ಸಾವಯವ ಇಂಗಾಲಾಂಶ ಹೆಚ್ಚುತ್ತದೆ. ಈ ಮಣ್ಣು ಮಳೆನೀರನ್ನು ಹೆಚ್ಚು ಪ್ರಮಾಣದಲ್ಲಿ ನೆಲದಲ್ಲಿ ಇಂಗಿಸುತ್ತದೆ ಹಾಗೂ ಹಿಡಿದಿಟ್ಟುಕೊಳ್ಳುತ್ತದೆ.
• ಉದುರಿದ ಎಲೆಗಳು ಮಣ್ಣ ಮೇಲೆ ಸ್ವಲ್ಪ ಕಾಲ ಬಿಸಿಲು ಬೀಳದಂತೆ ಮಾಡಿ ನೆಲದ ತಂಪನ್ನು ಕಾಯುತ್ತವೆ. ಈ ಮಣ್ಣಿನಲ್ಲಿ ಮಣ್ಣು ಜೀವಿಗಳು ವಾಸಿಸುತ್ತವೆ. ಮಣ್ಣನ್ನು ಆರೋಗ್ಯಕರವಾಗಿ ಇರಿಸುತ್ತವೆ. ಹಾಗೂ ಮುಂದಿನ ಮಳೆಗಾಲದಲ್ಲಿ ಮಣ್ಣು ಹೆಚ್ಚು ಸವಕಳಿಗೆ ತುತ್ತಾಗುವುದಿಲ್ಲ.
• ಕ್ಯಾಲ್ಸಿಯಂ, ಸಿಲಿಕಾ, ಬೋರಾನ್, ಕಬ್ಬಿಣ, ಮ್ಯಾಂಗನೀಸ್ ಅಂಶಗಳೂ ಸಹ ಒಣಗಿದ ಎಲೆಗಳಲ್ಲಿರುತ್ತವೆ. ಅವು ಮಣ್ಣಲ್ಲಿ ಬೆರೆತು ಪೋಷಕಾಂಶಗಳಾಗುತ್ತವೆ. ಇವು ಗಿಡ-ಮರಗಳ ವಿವಿಧ ಭಾಗಗಳಿಗೆ ತಲುಪುತ್ತವೆ. ಪೌಷ್ಟಿಕ ಆಹಾರದ ಜಾಲ ಸೃಷ್ಟಿಯಾಗುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!