Wednesday, October 5, 2022

ವಿಕಿರಣಶಾಸ್ತ್ರಜ್ಞರನ್ನು ಸ್ಮರಿಸೋಣ…

Follow Us

ಇಂದು ನವೆಂಬರ್ 8, ಅಂತಾರಾಷ್ಟ್ರೀಯ ವಿಕಿರಣಶಾಸ್ತ್ರ ದಿನ. ಕೊರೋನಾ ಕಾಲದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಸಿಬ್ಬಂದಿಯಲ್ಲಿ ಇವರೂ ಮುಂಚೂಣಿಯಲ್ಲೇ ಇದ್ದಾರೆ.

  ಇಂದು ಅಂತಾರಾಷ್ಟ್ರೀಯ ವಿಕಿರಣಶಾಸ್ತ್ರ ದಿನ  


newsics.com Features Desk

 ವೈ ದ್ಯರ ಬಳಿ ಹೋದಾಗ ಸಾಮಾನ್ಯವಾಗಿ ಬರುವ ಸಲಹೆ, “ಒಮ್ಮೆ ಸ್ಕ್ಯಾನ್ ಮಾಡೋಣ, ಒಂದು ಎಕ್ಸ್ ರೇ ಮಾಡಿಸಿ, ಈ ಪರೀಕ್ಷೆ ಆಗಬೇಕು”…ಇತ್ಯಾದಿ. ಯಾವುದೇ ಪ್ರಯೋಗಾಲಯಕ್ಕೆ ಹೋದರೆ ಅಲ್ಲಿ ವಿಕಿರಣ ಶಾಸ್ತ್ರಜ್ಞರು ಇದ್ದೇ ಇರುತ್ತಾರೆ. ಅವರೇ ಅಲ್ಲಿನ ಯಂತ್ರೋಪಕರಣಗಳ ಸರಿಯಾದ ಬಳಕೆಯನ್ನು ತಿಳಿದಿರುತ್ತಾರೆ. ತಮ್ಮ ಯಾವುದೇ ಅನಿಸಿಕೆಗಳನ್ನು ಪ್ರಕಟಿಸದೆ ಕೇವಲ ಪರೀಕ್ಷೆಯನ್ನು ಮಾತ್ರ ವೃತ್ತಿಪರವಾಗಿ ನಡೆಸಿಕೊಡುವ ವಿಕಿರಣಶಾಸ್ತ್ರಜ್ಞರು ಆಧುನಿಕ ಕಾಲದಲ್ಲಿ ಬಹಳ ಮುಖ್ಯವಾದ ಭೂಮಿಕೆ ನಿಭಾಯಿಸುತ್ತ, ವೈದ್ಯಕೀಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಕೊರೋನಾ ಸಮಯದಲ್ಲೂ ವಿಕಿರಣಶಾಸ್ತ್ರಜ್ಞರು ನೀಡುತ್ತಿರುವ ಕೊಡುಗೆ ಅಪಾರ.
ಇಂದು ನವೆಂಬರ್ 8 ಅಂತಾರಾಷ್ಟ್ರೀಯ ವಿಕಿರಣಶಾಸ್ತ್ರ ದಿನ. 2020ನೇ ಸಾಲಿನ ವಿಕಿರಣಶಾಸ್ತ್ರ ದಿನ ಥೀಮ್ ಅವರಿಗೇ ಸಮರ್ಪಣೆಯಾಗಿದೆ. ಈ ಬಾರಿ, “ಕೋವಿಡ್ ರೋಗಿಗಳಿಗೆ ವಿಕಿರಣಶಾಸ್ತ್ರಜ್ಞರ ಬೆಂಬಲ” ಎನ್ನುವ ಥೀಮ್ ನೊಂದಿಗೆ ಆಚರಿಸಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಮಾತ್ರವೇ ವಿಕಿರಣಶಾಸ್ತ್ರಜ್ಞರ ದಿನವನ್ನು ಆಚರಿಸಲಾಗುತ್ತಿದೆ. ಇದು ಒಂಬತ್ತನೆಯ ಆಚರಣೆ. ಈ ಬಾರಿ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಮನಗಂಡು ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಥೀಮ್ ಇರಿಸಲಾಗಿದೆ. ವಿಕಿರಣಶಾಸ್ತ್ರಜ್ಞರ ಮಹತ್ವವನ್ನು ವಿಶ್ವಕ್ಕೆ ತಿಳಿಸುವ ನಿಟ್ಟಿನಲ್ಲಿ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ವಿಕಿರಣಶಾಸ್ತ್ರ ತೀವ್ರವಾಗಿ ಪ್ರಗತಿಯಾಗುತ್ತಿರುವ ಕ್ಷೇತ್ರ. ಪ್ರತಿವರ್ಷ ವಿನೂತನ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತವೆ. ಆರೋಗ್ಯ ಕ್ಷೇತ್ರದಲ್ಲಿ ಇದನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಅಧಿಕೃತ ರೇಡಿಯಾಲಜಿಸ್ಟ್ ಗಳಿದ್ದಾರೆ. ಇಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ತೀರ ಕಡಿಮೆ. ಈ ಹಿನ್ನೆಲೆಯಲ್ಲಿ ಇದು ಅಪಾರ ಉದ್ಯೋಗಾವಕಾಶ ಕಲ್ಪಿಸುತ್ತಿರುವ ಕ್ಷೇತ್ರವೂ ಆಗಿದ್ದು, ವೈದ್ಯ ಸೇವೆ ಆಯ್ಕೆ ಮಾಡಿಕೊಳ್ಳುವವರನ್ನು ಆಕರ್ಷಿಸುತ್ತಿದೆ.
ಏನೇ ಆಗಲಿ, ನಮ್ಮೊಳಗಿನ, ನಮಗರಿಯದ ಶರೀರ ಲೋಕವನ್ನು ತೆರೆದಿಡುವ, ರೋಗ ಪತ್ತೆಗೆ ನೆರವಾಗುವ ವಿಕಿರಣ ಶಾಸ್ತ್ರಜ್ಞರಿಗೆ ಒಂದು ಸಲಾಂ ಹೇಳೋಣ.

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!