Saturday, January 23, 2021

ವಲಸಿಗರ ಬದುಕು ಹಸನಾಗಿರಲಿ

ವಲಸೆ ಹೋಗುವುದು ಮಾನವನ ಸಹಜ ಮೂಲ ಗುಣ. ಯಾವ್ಯಾವುದೋ ಕಾರಣಗಳಿಂದ ತಾನಿದ್ದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಿ ಬದುಕು ಕಟ್ಟಿಕೊಳ್ಳುವುದು ಮಾನವನಿಗೆ ಲಾಭವನ್ನೂ ತಂದುಕೊಡಬಲ್ಲದು, ಸಂಕಷ್ಟವನ್ನೂ ನೀಡಬಹುದು. ಇಂದು (ಡಿ.18) ಅಂತಾರಾಷ್ಟ್ರೀಯ ವಲಸಿಗರ ದಿನ. ಕೊರೋನಾ ಕಾಲದಲ್ಲಿ ವಲಸಿಗರ ಬದುಕು ಹೆಚ್ಚು ಅತಂತ್ರವಾಗಿದೆ.
♦ ವಿಧಾತ್ರಿ
newsics.com@gmail.com


 ಒಂ ದು ಸ್ಥಳದಿಂದ ಇನ್ನೊಂದು ಪ್ರದೇಶಕ್ಕೆ ಹೋಗಿ ನೆಲೆಸುವುದು, ಅಲ್ಲಿಯವರಾಗಿ ಬಾಳುವುದು ಮನುಷ್ಯನಿಗೆ ಹೊಸದಲ್ಲ. ಬಹುಶಃ ಮನುಷ್ಯನ ಮೂಲ ಗುಣಸ್ವಭಾವದಲ್ಲೇ ವಲಸೆಯ ಆಸೆಯೊಂದು ಮೊಳಕೆಯೊಡೆಯುತ್ತಲೇ ಇರುತ್ತದೆ. ಉತ್ತಮ ಬದುಕಿಗಾಗಿ, ಇನ್ನೊಂದಿಷ್ಟು ಹೊಸ ಅವಕಾಶಗಳಿಗಾಗಿ, ಯಾವುದರಿಂದಲೋ ತಪ್ಪಿಸಿಕೊಳ್ಳಲು, ಇನ್ಯಾವುದೋ ಭರವಸೆಯಿಂದ ವಲಸೆ ಹೋಗುತ್ತಲೇ ಇರುತ್ತಾನೆ. ಇಂದಿನ ಆಧುನಿಕ ಜೀವನದಲ್ಲೂ ಈ ಸ್ವಭಾವದಲ್ಲಿ ಬದಲಾವಣೆಯಾಗಿಲ್ಲ. ದೇಶಗಳ ಗಡಿಯ ಹಂಗಿನಲ್ಲೂ ಇನ್ನೊಂದು ಕಡೆ ತೆರಳಲು ಯತ್ನಿಸುವುದು ನಡೆದೇ ಇರುತ್ತದೆ. ಹೀಗಾಗಿ, ವಲಸೆ ಎನ್ನುವುದು ಆಧುನಿಕ ಜೀವನದ ಸಮಸ್ಯೆಯೂ ಆಗಿದೆ.
ಇಂದು (ಡಿ.18) ಅಂತಾರಾಷ್ಟ್ರೀಯ ವಲಸಿಗರ ದಿನ. ಕೊರೋನಾ ಸಾಂಕ್ರಾಮಿಕದ ಈ ದಿನಗಳಲ್ಲಿ ವಲಸಿಗರ ಬದುಕು ಇನ್ನಷ್ಟು ಸಂಕಷ್ಟಮಯವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿರುವ ಅದೆಷ್ಟೋ ಜನರ ಬದುಕು ಇಂದು ಅತಂತ್ರವಾಗಿದೆ. ಅಮೆರಿಕ ಮಾತ್ರವಲ್ಲ, ಈಗ ಎಲ್ಲ ದೇಶಗಳೂ ಕೊರೋನಾ ಕಾಲದ ಸಂಕಷ್ಟ ಪರಿಹರಿಸಿಕೊಳ್ಳಲು ತಮ್ಮ ದೇಶಕ್ಕೆ, ತಮ್ಮ ದೇಶದ ಜನಕ್ಕೆ ಆದ್ಯತೆ ನೀಡಿರುವುದರಿಂದ ಅಲ್ಲಿರುವ ವಿದೇಶಿಗರಿಗೆ ಸಮಸ್ಯೆಯಾಗಿದೆ. ಇದು ಅಧಿಕೃತವಾಗಿ ತೆರಳಿರುವವರ ಕತೆಯಾದರೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅನಧಿಕೃತವಾಗಿ ಪ್ರವೇಶಿಸುವವರದ್ದು ಇನ್ನೊಂದು ರೀತಿಯದ್ದು. ಟರ್ಕಿಯಂಥ ದೇಶದಿಂದ ಯುರೋಪ್ ಗೆ ವಲಸೆ ತೆರಳುವವರದ್ದು ಸಮಸ್ಯೆಯಾಗಿದೆ. ಅಷ್ಟು ದೂರವೇಕೆ? ನಮ್ಮ ಭಾರತದಲ್ಲೇ ವಲಸಿಗರ ಸಮಸ್ಯೆ ಬೃಹತ್ತಾಗಿದೆ. ವಲಸಿಗರನ್ನು ಗುರುತಿಸಲು ಅನುಕೂಲವಾಗಲೆಂದು ರಾಷ್ಟ್ರೀಯ ಪೌರತ್ವ ನೋಂದಣಿಗೆ ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಅಸ್ಸಾಂನಲ್ಲಿ ಇದು ಪೂರ್ಣಗೊಂಡಿತಾದರೂ ವಿವಾದ ಬಗೆಹರಿದಿಲ್ಲ. ಅಲ್ಲದೆ, ಇದು ದೇಶಾದ್ಯಂತ ವಿವಾದದ ಕಿಚ್ಚನ್ನು ಹೊತ್ತಿಸಿತ್ತು.
ಸುರಕ್ಷಿತ ವಲಸೆಗೆ ಆದ್ಯತೆ
ಕೊರೋನಾ ಸಂಕಷ್ಟದಲ್ಲಿ ವಲಸಿಗರ ಬದುಕು ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಮಾಜದ ನಿರ್ಮಾಣಕ್ಕಾಗಿ ಸುರಕ್ಷಿತ, ನಿಯಮಿತ ವಲಸೆಯನ್ನು ಜಾರಿಗೆ ತರಬೇಕಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರೆಸ್ ಆಶಯ ವ್ಯಕ್ತಪಡಿಸಿದ್ದಾರೆ.
ಹವಾಮಾನ ಬದಲಾವಣೆ ಮತ್ತು ವಲಸೆ
ಹವಾಮಾನ ಬದಲಾವಣೆಯಿಂದ 2050ರೊಳಗೆ ದಕ್ಷಿಣ ಏಷ್ಯಾ ದೇಶಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋಗುವ ಅನಿವಾರ್ಯತೆಗೆ ಸಿಲುಕಲಿದ್ದಾರೆ ಎಂದು ಆ್ಯಕ್ಷನ್ ಏಡ್ ಇಂಟರ್ ನ್ಯಾಷನಲ್ ಅಧ್ಯಯನ ಹೇಳಿದೆ. ಸುಮಾರು 6.2 ಕೋಟಿ ಜನ ಹವಾಮಾನ ಬದಲಾವಣೆ ಸಂಬಂಧಿತ ಸಮಸ್ಯೆಗಳಿಂದಾಗಿ ತಾವಿರುವ ಸ್ಥಳವನ್ನು ತ್ಯಜಿಸುತ್ತಾರೆ ಎಂದು ದಕ್ಷಿಣ ಏಷ್ಯಾ ವಲಯದ ಸಮೀಕ್ಷೆ ಬಹಿರಂಗಪಡಿಸಿದೆ. ಈಗಾಗಲೇ ಅನೇಕ ಪ್ರದೇಶಗಳಲ್ಲಿ ಪ್ರವಾಹ, ಬರಗಾಲ, ಚಂಡಮಾರುತಗಳಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದು, ಮುಂದಿನ ದಿನಗಳಲ್ಲಿ ವಲಸೆಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿ ಬರಬಹುದು ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!