Saturday, January 23, 2021

ಮುಖಕ್ಕಿರಲಿ ಟ್ರೆಂಡಿ ಮಾಸ್ಕ್

ಕಳೆದ ಮಾರ್ಚ್’ನಲ್ಲಿ ಮಾಸ್ಕ್ ಎಂದರೆ ಯಾರಿಗೂ ಹೆಚ್ಚಿನ ಅರಿವಿರಲಿಲ್ಲ. ಮೊದಮೊದಲು ಮುಖಕ್ಕೆ ಕರ್ಚೀಫ್ ಸುತ್ತಿಕೊಳ್ಳುತ್ತಿದ್ದವರೂ ಇಂದು ಮಾಸ್ಕ್ ಧರಿಸುತ್ತಾರೆ. ಎಲ್ಲಿ ಹೋಗಬೇಕೆಂದರೂ ಮಾಸ್ಕ್ ಕಡ್ಡಾಯವೆಂದಾದ ಮೇಲೆ ಅದನ್ನು ತಮ್ಮಿಷ್ಟದಂತೆ ಧರಿಸುವ ಟ್ರೆಂಡ್ ಈಗ ಬೆಳೆದಿದೆ. ಈಗಂತೂ ದುಬಾರಿ ಡಿಸೈನರ್ ಮಾಸ್ಕ್’ಗಳು ಸಹ ಫ್ಯಾಷನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

♦ ಮಾಸ್ಕ್ ಸೃಷ್ಟಿಸಿರುವ ಮ್ಯಾಚಿಂಗ್ ಹವಾ  


♦ ಪ್ರಮಥ
newsics.com@gmail.com


 ಪರೂಪಕ್ಕೆಂಬಂತೆ ನಗರದ ಅಂಗಡಿಗಳ ಸಾಲಿಗೆ ಹೋಗಿದ್ದಾಗ ಕಸಿನ್ ಒಬ್ಬಳು, ಇತ್ತೀಚೆಗೆ ಪರ್ಪಲ್ ಕಲರ್ ಡ್ರೆಸ್ ತೆಗೆದುಕೊಂಡಿದ್ದೇನೆ. ಅದಕ್ಕೆ ಹೊಂದಿಕೆಯಾಗುವ ಮಾಸ್ಕ್ ಬೇಕು’ ಎನ್ನುತ್ತ ಪರ್ಪಲ್ ಕಲರ್ ಮಾಸ್ಕ್ ಹುಡುಕಿಕೊಂಡು ಅಲೆಯುತ್ತಿದ್ದಳು! ಒಂದು ಪುಟ್ಟ ಮಾಸ್ಕ್’ಗೆ ನಾಲ್ಕು ಅಂಗಡಿ ಸುತ್ತುವ ಅವಳ ತಾಳ್ಮೆಗೆ ಅಚ್ಚರಿಯಾದರೂ ಮಾಸ್ಕ್ ಸೃಷ್ಟಿಸಿರುವ ಟ್ರೆಂಡ್ ಅರಿವಿಗೆ ಬಂತು.
ಹೌದು, ಎಲ್ಲವನ್ನೂ ಚೂಸಿಯಾಗಿ, ಸ್ಟೈಲಿಷ್ ಆಗಿ ಆಯ್ಕೆ ಮಾಡುವ ಮಂದಿಗೆ ಇತ್ತೀಚಿನ ದಿನಗಳಲ್ಲಿ ಹೊಸದೊಂದು ಆಯ್ಕೆ ತೆರೆದುಕೊಂಡಿದೆ. ಅದೇ ಫೇಸ್ ಮಾಸ್ಕ್. ಹೌದು, ಯಾವುದಾದರೂ ಸರಿ, ಕಡ್ಡಾಯವಾಗಿ ಮಾಡಲೇಬೇಕು ಎಂದಾದರೆ ಅದನ್ನು ತನ್ನಿಚ್ಛೆಯಂತೆ ಮಾಡುವುದು ಮನುಷ್ಯನ ಪರಿಪಾಠ. ಅದಕ್ಕೀಗ ಮಾಸ್ಕ್ ಕೂಡ ಹೊರತಲ್ಲ.
ದುಬಾರಿ ಮಾಸ್ಕ್ ಗಳು!
ಈಗಂತೂ ಮನೆಮನೆಗಳಲ್ಲಿ ಮಾಸ್ಕ್ ಕುರಿತು ಒಂದು ರೀತಿಯ ಕ್ರೇಜ್ ಬೆಳೆದಿದೆ. ಹತ್ತಾರು ಮಾಸ್ಕ್’ಗಳನ್ನು ಇಟ್ಟುಕೊಂಡು ಡ್ರೆಸ್, ಶರ್ಟ್ ಬಣ್ಣಕ್ಕೆ ತಕ್ಕಂತೆ ಮ್ಯಾಚ್ ಮಾಡಿಕೊಳ್ಳುವ ಅಭ್ಯಾಸ ನಿಧಾನವಾಗಿ ಆರಂಭವಾಗುತ್ತಿದೆ. ಫ್ಯಾಷನ್ ಪ್ರಿಯರಂತೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಅವರಿಗಾಗಿಯೇ ಇಂದು ಮಾರುಕಟ್ಟೆಗಳಲ್ಲಿ ಡಿಸೈನರ್ ಮಾಸ್ಕ್’ಗಳು ಬಂದಿವೆ. ರಾಜಧಾನಿ ದೆಹಲಿಯಂಥ ಮಾರುಕಟ್ಟೆಗಳಲ್ಲಿ ಮಾಸ್ಕ್’ಗಳ ವೈವಿಧ್ಯ ನೋಡಿದರೆ ಅಚ್ಚರಿಯಾಗುತ್ತದೆ. ಅಷ್ಟರಮಟ್ಟಿಗೆ ಮಾಸ್ಕ್’ಗಳು ಇಂದು ಜನಪ್ರಿಯ.
ಡಿಸೈನರ್ ಮಾಸ್ಕ್’ಗಳ ದರ ಕೇಳಿದರೂ ಸಾಮಾನ್ಯರಿಗೆ ಅಚ್ಚರಿಯಾಗಬಲ್ಲದು. 2000-8000 ರೂ.ವರೆಗಿನ ಮಾಸ್ಕ್ ಗಳು ಇಂದು ಲಭ್ಯವಿವೆ! ಇನ್ನು, ಮದುವಣಗಿತ್ತಿ ತನ್ನ ಲೆಹೆಂಗಾ, ಭರ್ಜರಿ ರೇಷ್ಮೆ ಸೀರೆ ಎಲ್ಲದಕ್ಕೂ ಮ್ಯಾಚಿಂಗ್ ಮಾಸ್ಕ್ ಗಳನ್ನು ಧರಿಸಲೇಬೇಕು.
ಮಾಸ್ಕ್ ಟ್ರೆಂಡ್
ಮೊದಮೊದಲು ಇಷ್ಟು ದೀರ್ಘ ಕಾಲ ಮಾಸ್ಕ್ ಗಳನ್ನು ಧರಿಸಬೇಕೆಂಬ ಅಂದಾಜು ಯಾರಿಗೂ ಇರಲಿಲ್ಲ. ಈಗ ಅವು ಫ್ಯಾಷನ್ ಭಾಗವಾಗುವಷ್ಟರ ಮಟ್ಟಿಗೆ ಪ್ರಾಮುಖ್ಯತೆ ಪಡೆದಿವೆ. ಪ್ರಿಂಟ್, ಕಣ್ಣುಕುಕ್ಕುವ, ಎಂಬ್ರಾಯ್ಡರಿ, ಪೇಂಟ್ ಮಾಡಿರುವ ಮಾಸ್ಕ್ ಗಳು ಇಂದು ಟ್ರೆಂಡಿ ಎನಿಸಿವೆ. ಸಾಮಾನ್ಯ ಮಾರುಕಟ್ಟೆಗಳಿಂದ ಡಿಸೈನರ್ ಗಳಲ್ಲಿ ಲಭ್ಯವಿರುವ ಹೈ ಎಂಡ್ ಮಾಸ್ಕ್ ಗಳು ಎಲ್ಲ ವರ್ಗದ ಜನರ ಮನತಣಿಸುತ್ತಿವೆ. ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲೂ ಮಾಸ್ಕ್ ಮಾರಾಟಕ್ಕಿವೆ.
ಮದುವಣಗಿತ್ತಿಯಾಗಿದ್ದ ಭಾವ್ ದೀಪ್ ಕೌರ್ ಎಂಬಾಕೆಯಂತೂ ತನ್ನ ಮೆಹೆಂದಿ ಕಾರ್ಯಕ್ರಮದಲ್ಲಿ ತನ್ನ ಲೆಹೆಂಗಾದ ಡಿಸೈನ್ ಇರುವ ಮಾಸ್ಕ್ ಅನ್ನೇ ಧರಿಸಿ ಅಚ್ಚರಿ ಮೂಡಿಸಿದ್ದಳು. ಅಸಲಿಗೆ, ಆಕೆ ತನ್ನ ಕೈ ತೋಳಿನ ಭಾಗದ ಬಟ್ಟೆಯನ್ನೇ ಮಾಸ್ಕ್ ಮಾಡಿ ಧರಿಸಿದ್ದಳು! ಇದು ಫ್ಯಾಷನ್ ಪ್ರಿಯರಲ್ಲಿ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣದಲ್ಲೂ ಬರೆದುಕೊಂಡಿದ್ದಳು. “ಸ್ಲೀವ್ ಅನ್ನೆ ಮುಖಕ್ಕೆ ಮಾಸ್ಕ್ ಮಾಡಿಕೊಂಡು ಧರಿಸಿದ್ದೇನೆ. ನನಗೆ ಲೆಹೆಂಗಾಕ್ಕೆ ಹೊಂದಿಕೆಯಾಗುವ ಮಾಸ್ಕ್ ಧರಿಸಿರುವುದಕ್ಕೆ ಖುಷಿಯಿದೆ’ ಎಂದು ಹೇಳಿಕೊಂಡಿದ್ದಳು.
ಇದೀಗ, ಸಣ್ಣಪುಟ್ಟ ನಗರಗಳ ಮದುಮಕ್ಕಳೂ ತಮ್ಮ ಮಾಸ್ಕ್ ಬಗ್ಗೆ ಎಚ್ಚರವಿಟ್ಟು ಆಯ್ಕೆ ಮಾಡಿಕೊಳ್ಳುವ ಪರಿಪಾಠ ಬೆಳೆದಿದೆ. ಒಟ್ಟಿನಲ್ಲಿ, ಮುಖ ಸ್ಪಷ್ಟವಾಗಿ ಕಾಣದಿದ್ದರೇನಾಯ್ತು? ಮಾಸ್ಕ್ ಕೂಡ ಫ್ಯಾಷನ್ ಹವಾ ಸೃಷ್ಟಿಸಿರುವುದು ಕೊರೋನಾ ಮಹಿಮೆಯಿಂದಲೇ ಎಂಬುದಂತೂ ನಿರ್ವಿವಾದ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 14,256 ಜನರಿಗೆ ಕೊರೋನಾ ಸೋಂಕು,152 ಮಂದಿ ಸಾವು

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆಯಲ್ಲಿ  14, 256 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.39,684 ಕ್ಕೆ...

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ಹೆಸರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...
- Advertisement -
error: Content is protected !!