Sunday, December 5, 2021

ಪ್ರಕೃತಿಯ ಕೊರಗು, ನಮ್ಮ ಸಂಗ್ರಹದ ಬೆರಗು

Follow Us

ಮನುಷ್ಯ ಹಾಳಾಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಬದಲು ಹಾಳಾಗದೆ ಅತಿ ಹೆಚ್ಚು ಸಮಯದವರೆಗೆ ಕೆಡದಂತೆ ಇಡಬಲ್ಲ ಹಣವನ್ನೂ ಸಂಗ್ರಹಿಸಲು ತೊಡಗಿದ. ಮುಂದೆ ಇದೇ ಕಾರಣದಿಂದಾಗಿ ತನ್ನ ಅವಶ್ಯಕತೆಗಳನ್ನು ವೃದ್ಧಿಸಿಕೊಂಡ ಮಾನವ ಅತ್ಯಂತ ಸುಲಭವಾಗಿ ಮತ್ತು ಹೇರಳವಾಗಿ ದೊರೆಯುತ್ತಿದ್ದ ಪ್ರಕೃತಿ ಸಂಪತ್ತನ್ನು ಬಳಸಿಕೊಳ್ಳತೊಡಗಿದ. ಮೊದಲೇ ಹೇಳಿದಂತೆ ಸಂಗ್ರಹ ಸಂಪಾದನೆ ಎಂದಾಯಿತು. ಸಂಗ್ರಹಿಸುವುದರಲ್ಲಿ ಪೈಪೋಟಿ ಶುರುವಾಯಿತು. ಪೈಪೋಟಿ ಹೆಚ್ಚಾದಂತೆ ಪ್ರಕೃತಿಯ ಬಳಕೆ ಅನಿವಾರ್ಯವಾಯಿತು.
♦  ಪಿ.ಎಸ್. ವೈಲೇಶ
response@134.209.153.225
newsics.com@gmail.com

ಸೃಷ್ಟಿಯಲ್ಲಿ ನಮ್ಮ ದೃಷ್ಟಿಯಲ್ಲಿ ಕನಿಷ್ಠವಾಗಿರುವ ಯಾವುದೇ ರೀತಿಯ ವಸ್ತುಗಳು ಅಥವಾ ಜೀವಿಗಳು ನಿಷ್ಪ್ರಯೋಜಕ ಅಲ್ಲವೇ ಅಲ್ಲ. ಕೆಲವೊಮ್ಮೆ ಗೆದ್ದಲು ಹುಳುವಿನಂತಹ ಜೀವಿಗಳು ಕೂಡ ನಮಗೆ ಅರಿಯದೇ ನಮಗೆ ಸಹಾಯ ಮಾಡಿರುತ್ತವೆ. ಹಾಗೆಯೇ ಹಾನಿ ಕೂಡ ಮಾಡಿರುತ್ತವೆ. ಕೆಲವು ಜೀವಿಗಳಿಂದ ಮಾನವರಿಗೆ ಹಾನಿಯಾದರೂ ಅವುಗಳು ಕೆಲವು ಜೀವಿಗಳ ಆಹಾರ ಮಾತ್ರವಲ್ಲದೆ ನಮಗೆ ಎಂದರೆ ಮಾನವರಿಗೆ ಅದ್ಭುತ ಪ್ರಕೃತಿಯ ಪಾಠಗಳನ್ನು ಕಲಿಸುವ ಗುರು ಎಂದರೆ ತಪ್ಪಾಗಲಾರದು. ಸೃಷ್ಟಿಯ ದೃಷ್ಟಿಯಿಂದ ನೋಡಿದಾಗ ಮಾನವ ಮತ್ತು ಇತರ ಯಾವುದೇ ಜೀವಿಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಇಲ್ಲವೆಂದು ಇತ್ತೀಚೆಗೆ ಒಬ್ಬರು ಹೇಳಿದ್ದರು. ನಿಜವೆನಿಸಿತು. ಆದರೆ ಮನುಜರಾದ ನಾವು ಮಾಡುತ್ತಿರುವುದೇನು. ಚೀನಾ ದೇಶದ ಜನಗಳನ್ನು ಅಸಹ್ಯವಾದುದನ್ನು ತಿನ್ನುವರು ಎಂಬ ಕಾರಣಕ್ಕಾಗಿ ದೂರುವ ನಾವು ನಮ್ಮ ಪ್ರಕೃತಿಯ ವಿರುದ್ಧದ ನಡೆಗಳನ್ನು ಗಮನಿಸುವುದೇ ಇಲ್ಲ. ಮುಖ್ಯವಾಗಿ ಒಂದು ವಿಚಾರವನ್ನು ನಾವು ಮನದಟ್ಟು ಮಾಡಿಕೊಳ್ಳಲೇಬೇಕು. ಸೃಷ್ಟಿಯ ಯಾವ ಜೀವಿಗಳು ಸಹ ತಮ್ಮ ನಿತ್ಯದ ಅವಶ್ಯಕತೆಯ ಹೊರತಾಗಿ ಅತಿ ಹೆಚ್ಚಿನ ಸಂಗ್ರಹಕ್ಕೆ ಇಳಿಯುವುದು ಮನುಷ್ಯ ಪ್ರಾಣಿ ಮಾತ್ರ. ಕೇವಲ ಮಳೆಗಾಲದ ಅವಶ್ಯಕತೆಗೆಂದು ಇರುವೆ ಮೊದಲಾದ ಜೀವಿಗಳು ಸಹ ಸಂಗ್ರಹಿಸುತ್ತವೆ.
ಬಹುಶಃ ಮಾನವ ಇರುವೆಗಳ ಸಂಗ್ರಹ ಸ್ವಭಾವವನ್ನು ಕಂಡ ಬಳಿಕ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಕಲಿತಿರಬೇಕು. ಆದರೆ ಹಿಂದಿನ ಕಾಲದಲ್ಲಿ ಆಹಾರ ಪದಾರ್ಥಗಳನ್ನು ನೇರವಾಗಿ ಸಂಗ್ರಹಿಸಿ ಇಡುವ ಸಮಯದಲ್ಲಿ ಶೀಘ್ರವಾಗಿ ಕೆಡುವ ಸಾಧ್ಯತೆ ಇದ್ದ ಕಾರಣ ಇತಿಮಿತಿಯಲ್ಲಿ ಸಂಗ್ರಹಿಸುತ್ತಿದ್ದರು. ಆದರೆ ಈಗ ಆಹಾರವನ್ನು ಕೆಡದೆ ಇರುವಂತೆ ತಿಂಗಳು ವರ್ಷಗಳ ಕಾಲ ತಡೆಯಲು ಸಾಧ್ಯವಿರುವುದರಿಂದ ಕೆಲವರು ಆಹಾರ ಪದಾರ್ಥಗಳನ್ನು ನೇರವಾಗಿ ಸಂಗ್ರಹಿಸಿಡುತ್ತಾರೆ. ಅದೇ ರೀತಿಯಲ್ಲಿ ಹಣ ಚಲಾವಣೆಗೆ ಬರುವ ಮುನ್ನ ವಸ್ತುಗಳ ಅದಲು ಬದಲು ಮಾಡಿಕೊಳ್ಳುವ ಮುಖಾಂತರ ತಮ್ಮ ಅಗತ್ಯಗಳನ್ನು ಮತ್ತು ಇತರರ ಅಗತ್ಯಗಳನ್ನು ಮನಗಂಡು ಅದಲು ಬದಲು ಮಾಡಿಕೊಳ್ಳುವ ಪರಿಮಾಣದ ಮೇಲೆ ಪ್ರಭಾವ ಬೀರುತ್ತಿತ್ತು ಎನಿಸುತ್ತದೆ. ಮುಂದೆ ಅದು ಪರಿವರ್ತನೆ ಹೊಂದಿ ಹಣ ಚಲಾವಣೆಗೆ ಬಂತೆಂದು ಬಹುತೇಕ ಪಾಠಗಳಲ್ಲಿ ನಮಗೆ ಹೇಳಲಾಗಿದೆ ಅಲ್ವೇ. ಹಾಗೆ ಮನುಷ್ಯ ಹಾಳಾಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಬದಲು ಹಾಳಾಗದೆ ಅತಿ ಹೆಚ್ಚು ಸಮಯದವರೆಗೆ ಕೆಡದಂತೆ ಇಡಬಲ್ಲ ಹಣವನ್ನೂ ಸಂಗ್ರಹಿಸಲು ತೊಡಗಿದ. ಮುಂದೆ ಇದೇ ಕಾರಣದಿಂದಾಗಿ ತನ್ನ ಅವಶ್ಯಕತೆಗಳನ್ನು ವೃದ್ಧಿಸಿಕೊಂಡ ಮಾನವ ಅತ್ಯಂತ ಸುಲಭವಾಗಿ ಮತ್ತು ಹೇರಳವಾಗಿ ದೊರೆಯುತ್ತಿದ್ದ ಪ್ರಕೃತಿ ಸಂಪತ್ತನ್ನು ಬಳಸಿಕೊಳ್ಳತೊಡಗಿದ. ಮೊದಲೇ ಹೇಳಿದಂತೆ ಸಂಗ್ರಹ ಸಂಪಾದನೆ ಎಂದಾಯಿತು. ಸಂಗ್ರಹಿಸುವುದರಲ್ಲಿ ಪೈಪೋಟಿ ಶುರುವಾಯಿತು. ಪೈಪೋಟಿ ಹೆಚ್ಚಾದಂತೆ ಪ್ರಕೃತಿಯ ಬಳಕೆ ಅನಿವಾರ್ಯವಾಯಿತು.
ಕೊನೆ ಕೊನೆಗೆ ಪ್ರಕೃತಿಯಲ್ಲಿ ನಾವು ಮಾಡಿದ ನಾಶವು ಮಾನವನ ವಿನಾಶದ ಅಂಚಿಗೆ ಬಂದು ತಲುಪಿತು. ಜತೆಜತೆಗೆ ಮಾನವರು ವಿಜ್ಞಾನ ತಂತ್ರಜ್ಞಾನ ಎಂದು ಮುಂದುವರಿದಂತೆ ವಿಭಿನ್ನ ರೀತಿಯ ಆವಿಷ್ಕಾರಗಳನ್ನು ಬಳಸಿ ಮತ್ತೆ ಇನ್ನೂ ಹೆಚ್ಚಿನ ದೌರ್ಜನ್ಯವನ್ನು ಪ್ರಕೃತಿಯ ವಿರುದ್ಧ ಮಾಡತೊಡಗಿದೆವು. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಇವೆಲ್ಲವೂ ಪ್ರಕೃತಿಯ ಪ್ರತಿಭಟನೆ ಎಂದರಿಯದೆ ಪ್ರಕೃತಿ ರೂಪಿಸಿದ ಎಲ್ಲ ರೋಗ-ರುಜಿನಗಳಿಗೆ ರಾಸಾಯನಿಕಗಳನ್ನು ಬಳಸಿ ಔಷಧಗಳನ್ನು ಕಂಡುಕೊಂಡೆವು. ಆದರೇನು ಮಾನವ ಚಾಪೆ ಕೆಳಗೆ ತೂರಿದರೆ ಪ್ರಕೃತಿ ರಂಗೋಲಿ ಕೆಳಗೆ ತೂರುತ್ತಾ ತನ್ನ ಭೂಭಾರವನ್ನು ಇಳಿಸಿಕೊಳ್ಳುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎನ್ನಬಹುದು. ಹಾಗಾಗಿ ಪ್ರಪಂಚದ ನಾನಾ ಕಡೆಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಎಂದರೆ ಎಂದೂ ಅತಿದೊಡ್ಡ ಮಳೆ ಬಾರದ ಸ್ಥಳಗಳಲ್ಲಿ ಇದ್ದಕ್ಕಿದ್ದಂತೆ ಪ್ರಳಯವೆನಿಸುವಂತಹ ಮಳೆ ಬಂದು ಜನಮನವನ್ನು, ಆಸ್ತಿ ಪಾಸ್ತಿ , ಪ್ರಕೃತಿ, ಜೀವರಾಶಿಗಳನ್ನು ನುಂಗಿ ನೀರು ಕುಡಿದುಬಿಡುವುದು.( ಉದಾಹರಣೆಗೆ ಕಳೆದ ಎರಡು ವರ್ಷಗಳಿಂದ ಕೊಡಗಿನ ಅತಿವೃಷ್ಟಿ, ಪೃಕೃತಿ ವಿಕೋಪ). ಉತ್ತರ ಭಾರತದ ಹಲವೆಡೆಗಳಲ್ಲಿ ಮಳೆ ಬಂದು ಗುಡಿ ಗುಂಡಾರಗಳು, ಮಸೀದಿ ಮಂದಿರಗಳು. ಇಗರ್ಜಿಗಳು ಸೇರಿದಂತೆ ಜಾತಿ ಮತದ ಭೇದ ಪ್ರಕೃತಿಗೆ ಇಲ್ಲವೆಂದು ತೋರಿಸುವ ಹಾಗೆ ಎಲ್ಲ ಜೀವಿಗಳನ್ನು ಸಹ ಮುಳುಗಿಸಿ ತನ್ನ ಭಾರವನ್ನು ಅಲ್ಪಮಟ್ಟಿಗೆ ಕಡಿಮೆ ಮಾಡಿಕೊಂಡಿತು ಎನ್ನಬಹುದು.
ಮನುಷ್ಯರ ಎಲ್ಲ ವಿಜ್ಞಾನದ ತಂತ್ರಜ್ಞಾನದ ಮುಂದೆ ಪ್ರಕೃತಿಯ ಅಟ್ಟಹಾಸ ನಡೆಯದು ಎಂದು ತಿಳಿದಿರುವ ಅರಿವುಗೇಡಿಗಳಿಗೆ ಪಾಠ ಕಲಿಸಲೆಂದೇ ಮತ್ತು ಪ್ರಕೃತಿಯ ಮಡಿಲಲ್ಲಿ ಹುದುಗಿರುವ ಅನೇಕ ಜೀವವೈವಿಧ್ಯತೆಗಳಲ್ಲಿ ಮಾನವ ಕೂಡ ಕೇವಲ ಒಂದು ಜೀವಿಯಷ್ಟೇ ಎಂಬುದನ್ನು ತಿಳಿಸಲು ಪ್ರಕೃತಿಯು ನಮಗಿಂದು ಕೇವಲ ಒಂದು ಪುಟ್ಟ ವೈರಾಣುವಿನ ಸಾಮರ್ಥ್ಯವನ್ನು ತೋರಿಸುವ ಮೂಲಕ ಪ್ರಕೃತಿಯ ಎದುರು ನಾವು ಎಷ್ಟು ಕುಬ್ಜರು ಎನ್ನುವುದನ್ನು ನಿರೂಪಿಸುತ್ತಿದೆ ಅಲ್ವೇ. ಸಾವು ಎದುರು ನಿಂತು ನಮ್ಮ ಬೇಟೆಯಾಡಲು ತೊಡಗಿದರೆ ಆಸ್ತಿ ಪಾಸ್ತಿ ಹಣಕಾಸು ಎಲ್ಲವೂ ಎಷ್ಟೊಂದು ತೃಣ ಸಮಾನವೆಂದು ಇಟಲಿಯ ಬೀದಿಗಳಲ್ಲಿ ಚೆಲ್ಲಾಡಿದ ನೋಟುಗಳ ನೋಟವನ್ನು (ಸತ್ಯವೊ ಸುಳ್ಳೊ ಅದು ಬೇರೆ) ಕಂಡು ಕೊರಗಿದ್ದೇವೆ. ಇದೇ ಸಮಯ ಸಂದೇಶಗಳನ್ನು ಉಪಯೋಗಿಸಿಕೊಂಡು ನಿತ್ಯಬಳಕೆಯ ವಸ್ತುಗಳನ್ನು ಕೃತಕ ಅಭಾವವನ್ನು ಸೃಷ್ಟಿಸಿ ಅವುಗಳನ್ನು ಒಂದಕ್ಕೆರಡು ಬೆಲೆಗೆ ಮಾರಾಟ ಮಾಡುವ ಕ್ರಿಮಿನಲ್ ಬುದ್ಧಿವಂತಿಕೆಯ ವ್ಯಾಪಾರಿಗಳು ತಮ್ಮ ಬುದ್ಧಿ ಬಿಡಲಿ.
ಒಂದಷ್ಟು ಅತಿ ಮುಂಜಾಗ್ರತೆಯ ಜನರು ತಮಗೆ ಅತೀ ಅಗತ್ಯವಿದೆ ಎನಿಸುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ ನಂತರವೂ ಸರ್ಕಾರ ನಿಗದಿಪಡಿಸಿದ ಪ್ರತಿ ಸಮಯಾವಕಾಶವನ್ನು ಉಪಯೋಗಿಸಿಕೊಂಡು ಆಹಾರ ಪದಾರ್ಥಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟುಕೊಳ್ಳುವ ತುರಾತುರಿ ಸಲ್ಲ. ಹಾಗೊಂದು ವೇಳೆ ಈ ರೀತಿಯ ಸಂಭವ ಎದುರಾದರೆ ಅವರ ಸಂಗ್ರಹ ಅದೆಷ್ಟು ದಿನ, ತಿಂಗಳು, ವರ್ಷ ಬಂದೀತು ಅಲ್ವೇ. ಜತೆಗೆ ಹೀಗೆ ಸಂಗ್ರಹಿಸುವ ಹುಚ್ಚು ಎಲ್ಲರಿಗೂ ಹಿಡಿದರೆ ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡೀಸ್‌ಗೆ ತಡೆ

newsics.com ಮುಂಬೈ: ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ದುಬೈಗೆ ಹೊರಟಿದ್ದ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಲುಕೌಟ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಡೆಯಲಾಗಿದೆ....

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,52,708 ಜನ ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...
- Advertisement -
error: Content is protected !!