newsics.com
ವಾರಂಗಲ್(ತೆಲಂಗಾಣ): ಚಿತ್ರ-ವಿಚಿತ್ರ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗಲೂ ಅಂತಹುದೇ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ದೇವರಿಗೆ ವಿಸ್ಕಿ ಕುಡಿಸಿ ಸುದ್ದಿಯಾಗಿದ್ದಾರೆ.
ಹೊಸ ಸಿನಿಮಾ ‘ಕೊಂಡ’ ಸಮಾರಂಭ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ವಾರಂಗಲ್ನ ಮೈಸಮ್ಮ ದೇವಿಗೆ ಪೂಜೆ ಮಾಡಿದ್ದಾರೆ. ಈ ವೇಳೆ ದೇವಿ ಮೂರ್ತಿಗೆ ವಿಸ್ಕಿ ಕುಡಿಸಿ, ಮದ್ಯ ನೈವೇದ್ಯ ಮಾಡಿದ್ದಾರೆ.
ಮೈಸಮ್ಮ ದೇವತೆಯ ಮೂರ್ತಿಗೆ ವಿಸ್ಕಿ ಕುಡಿಸುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ”ನಾನು ವೋಡ್ಕಾ ಮಾತ್ರವೇ ಕುಡಿಯುತ್ತೇನೆ. ಆದರೆ ದೇವತೆ ಮೈಸಮ್ಮನಿಗೆ ವಿಸ್ಕಿಕುಡಿಸಿದೆ’ ಎಂದು ಹೇಳಿದ್ದಾರೆ.
ಈ ಪೋಸ್ಟ್ಗೆ ಹಲವರು ಕಮೆಂಟ್ ಮಾಡಿದ್ದಾರೆ. ವರ್ಮಾಗೆ ಹಿಂದು ದೇವತೆಗಳ ಬಗ್ಗೆ ಗೌರವವಿಲ್ಲ ಎಂದು ಹೇಳಿದ್ದಾರೆ. ಕೆಲವರು, ‘ಮದ್ಯದ ಜತೆಗೆ ಕೆಎಫ್ಸಿ ಚಿಕನ್ ಸಹ ನೀಡಬೇಕಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.
ಆದರೆ, ವರ್ಮಾ ಮಾಡಿರುವ ಮದ್ಯ ನೈವೇದ್ಯ ಹೊಸದೇನೂ ಅಲ್ಲ. ವಾರಂಗಲ್ನಲ್ಲಿ ಮೈಸಮ್ಮ ದೇವರಿಗೆ ಮದ್ಯವನ್ನು ಅಭಿಷೇಕ ಮಾಡಲಾಗುತ್ತದೆ. ಮೈಸಮ್ಮ ದೇವರಿಗೆ ಕಳ್ಳು (ಸಾರಾಯಿ) ನೈವೇದ್ಯ ನೀಡುವುದು ತೆಲಂಗಾಣ ರಾಜ್ಯದಲ್ಲಿ ಹಳೆಯ ಪದ್ಧತಿ. ಕರ್ನಾಟಕದ ಕೆಲವು ದೇವಾಲಯಗಳಲ್ಲಿಯೂ ದೇವರಿಗೆ ಮದ್ಯ ಸಮರ್ಪಿಸುವ ಸಂಪ್ರದಾಯ ಇದೆ.
ಒಂದು ಕಾಲದಲ್ಲಿ ಭಾರತೀಯ ಸಿನಿಮಾ ರಂಗದ ದಿಕ್ಕನ್ನೇ ಬದಲಾಯಿಸಿದ್ದ ನಿರ್ದೇಶಕ ವರ್ಮಾ, ಹಲವು ಸಾಫ್ಟ್ ಪೋರ್ನ್ ಸಿನಿಮಾ ಮಾಡಿ ವೆಬ್ಸೈಟ್ಗಳ ಮೂಲಕ ಹಣ ಗಳಿಸಿದ್ದರು. ಬಳಿಕ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಮೇಲಿನ ತಮ್ಮ ವೈಯಕ್ತಿಕ ದ್ವೇಷದಿಂದ ಅವರ ವಿರುದ್ಧ ಸಿನಿಮಾಗಳನ್ನು ಮಾಡಿದ್ದರು.
ಮಾಜಿ ಸಿಎಂ ಬಿಎಸ್ವೈ ಆಪ್ತರ ಮನೆಯಲ್ಲಿ 750 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ
2 ತಲೆ, 3 ಕಣ್ಣಿನ ಕರು ಜನನ: ದುರ್ಗೆಯ ಅವತಾರ ಎಂದು ಪೂಜಿಸುತ್ತಿರುವ ಜನ