ನವದೆಹಲಿ: ಕಾನೂನುಬಾಹಿರ, ಅಕ್ರಮ
ವಲಸಿಗರನ್ನು ಬಂಧಿಸಿ
ಗಡೀಪಾರು ಮಾಡುವ ಅಧಿಕಾರವನ್ನು ಸಂವಿಧಾನದ ಪ್ರಕಾರ ರಾಜ್ಯಗಳಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಕರ್ನಾಟಕದ ಅಕ್ರಮ ಬಾಂಗ್ಲಾದೇಶ ಮತ್ತು ಇತರ ವಲಸಿಗರ ಬಗ್ಗೆ ಇತ್ತೀಚಿನ ಎನ್‌ಐಎ ವರದಿಯನ್ನು ಪರಿಗಣಿಸಿ ಅಕ್ರಮ
ವಲಸಿಗರನ್ನು ಗಡೀಪಾರು ಮಾಡಲು ಸರ್ಕಾರ ಯಾವುದೇ ನಿರ್ದಿಷ್ಟ ಕ್ರಮಗಳನ್ನು
ಪರಿಗಣಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ್ ರೈ, ಅಕ್ರಮ ವಲಸಿಗರು ಸರಿಯಾದ , ಪ್ರಯಾಣ
ದಾಖಲೆಗಳಿಲ್ಲದೆ ವಾಸವಾಗಿದ್ದರೆ ಸಂವಿಧಾನದ ಪ್ರಕಾರ
ಅಕ್ರಮವಾಗಿ ಉಳಿದುಕೊಂಡಿರುವ ವಿದೇಶಿ ಪ್ರಜೆಗಳನ್ನು ಬಂಧಿಸಿ, ಗಡೀಪಾರು
ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಅವರು
ಸ್ಪಷ್ಠಪಡಿಸಿದರು.
ವಿದೇಶಿ ಕಾಯ್ದೆ 1946 ರ ಸೆಕ್ಷನ್ 3 (2) (ಇ) ಅಡಿಯಲ್ಲಿ
ದೇಶದಲ್ಲಿ ಅಕ್ರಮವಾಗಿ ಉಳಿದುಕೊಂಡಿರುವ ವಿದೇಶಿ ಪ್ರಜೆಯನ್ನು ಬಂಧಿಸುವ
ಅಧಿಕಾರ ಕೇಂದ್ರಕ್ಕೂ ಇದೆ ಎಂದು ಮಾಹಿತಿ ನೀಡಿದರು.