* ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ
* ವಿವಾದಿತ ಜಮೀನು ರಾಮಲಲ್ಲಾ ಪಾಲು
* ಸುನ್ನಿ ವಕ್ಫ್ ಬೋರ್ಡ್ ಗೆ ಐದೆಕರೆ ಜಮೀನು ನೀಡಲು ಸೂಚನೆ
ದೆಹಲಿ:
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡ್ಡಿಯನ್ನು ಸುಪ್ರೀಂ ಕೋರ್ಟ್ ನಿವಾರಿಸಿದೆ. ರಾಮಮಂದಿರ ನಿರ್ಮಾಣ ಹೊಣೆಯನ್ನು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ವಹಿಸಿ ಐತಿಹಾಸಿಕ ತೀರ್ಪು ನೀಡಿದೆ.
ಮಂದಿರ ನಿರ್ಮಾಣಕ್ಕೆ ಮೂರು ತಿಂಗಳಲ್ಲಿ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ಮೂಲಕ 135 ವರ್ಷಗಳ ವಿವಾದಕ್ಕೆ ಸುಪ್ರೀಂ ಕೋರ್ಟ್ 1045 ಪುಟಗಳ ತೀರ್ಪಿನ ಮೂಲಕ ಇತಿಶ್ರೀ ಬರೆದಿದೆ.
ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠ ನೀಡಿರುವ ಸರ್ವಾನುಮತದ ತೀರ್ಪು ಇದಾಗಿದ್ದು, ವಿವಾದಿತ ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿದೆ.
ಅಯೋಧ್ಯೆಯ ವಿವಾದಿತ ಜಮೀನು ರಾಮಲಲ್ಲಾ ಪಾಲಾಗಿದೆ. ಸುನ್ನಿ ವಕ್ಫ್ ಬೋರ್ಡ್ ಗೆ ವಿಶೇಷಾಧಿಕಾರ ಬಳಸಿ ಮೂರು ತಿಂಗಳಲ್ಲಿ ಬೇರೆ ಕಡೆ ಐದು ಎಕರೆ ಜಮೀನು ನೀಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.