ಬೆಂಗಳೂರು: ಬೀದಿ ನಾಯಿಯ ಕಾಟದಿಂದ ಬೇಸತ್ತ ನಿವೃತ್ತ ಪ್ರೊಫೆಸರ್ ಒಬ್ಬರು ಅದಕ್ಕೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಶ್ವಾನಕ್ಕೆ ಜಯನಗರದ ಪಶುವೈದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಯನಗರದ 5ನೇ ಬ್ಲಾಕ್ ನ ನಿವೃತ್ತ ಫ್ರೊಫೆಸರ್ ಶ್ಯಾಂ ಸುಂದರ್ (83) ತೋಟಕ್ಕೆ ಪ್ರತಿನಿತ್ಯ ಬರುತ್ತಿದ್ದ ಈ ನಾಯಿ ಅಲ್ಲೇ ಶೌಚ ಮಾಡುವುದರ ಜೊತೆಗೆ, ಬೇರೆಡೆಯಿಂದ ಮೂಳೆಗಳನ್ನು ತಂದು ಮನೆಯ ಮುಂದೆ ಎಸೆಯುತ್ತಿತ್ತು. ರಾತ್ರಿಯಿಡಿ ನಿರಂತರವಾಗಿ ಬೊಗಳಿ ಕಿರಿಕಿರಿಯುಂಟು ಮಾಡುತ್ತಿತ್ತು. ಇದರಿಂದ ಕೋಪಗೊಂಡ ಸುಂದರ್, ಏರ್ ಗನ್ ನಿಂದ ಗುಂಡು ಹಾರಿಸಿದ್ದರು ಘಟನೆ ಸಂಬಂಧ ಪೊಲೀಸರು ಪ್ರೊಫೆಸರ್ ಅನ್ನು ಬಂಧಿಸಿ,ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.