ಗುರುನಾನಕ್ ದೇವ್ ಅವರ 550 ‘ಶಬ್ದ’ಗಳಿಗೆ ಧ್ವನಿ
ಚಂಡೀಗಢ: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಚಂಡೀಗಢದ ಅರವಿಂದರ್ ಜಿತ್ ಸಿಂಗ್ ಅವರು ಗುರುನಾನಕ್ ಅವರ 550 ಕೀರ್ತನೆ (ಶಬ್ದ)ಗಳಿಗೆ ಧ್ವನಿ ನೀಡಿದ್ದು, ಸಂಗೀತ ಸಂಯೋಜನೆ ಮಾಡಿದ್ದಾರೆ.
ಕಳೆದ ಒಂದು ವರ್ಷಗಳಿಂದ ಗುರುನಾನಕ್ ಅವರ ಗೀತೆಗಳ ಸಂಗ್ರಹ ಹಾಗೂ ಮುದ್ರಣದಲ್ಲಿ ತೊಡಗಿರುವ ಸಿಂಗ್, ಐದು ಶತಮಾನಗಳ ಹಿಂದಿನ ಗುರುನಾನಕ್ ಅವರ ಶಬ್ದಗಳಿಗೆ ಕಂಠದಾನ ಮಾಡಿದ್ದಾರೆ.
ದೇವರ ಕುರಿತು ಏಕತೆ, ದೈವಿಕ, ಪ್ರೀತಿ, ಶಾಂತಿ, ಸಾರ್ವತ್ರಿಕ ಸಹೋದರತೆ ಮತ್ತು ಆಧ್ಯಾತ್ಮಕ ಭಕ್ತಿಯನ್ನು ಸಾರುವ ‘ಗುರ್ಬಾನಿ’ಗಳನ್ನು ಜಗತ್ತಿಗೆ ಸಾರುವುದು ಇದರ ಉದ್ದೇಶವಾಗಿದೆ.
‘ಲಿಸನ್ ಟು ನಾನಕ್ ’ ಎಂಬ ಹೆಸರಿನ ಈ ಅಲ್ಬಂ ನವೆಂಬರ್ 12ರ ಗುರು ನಾನಕ್ ದೇವ್ ಅವರ 550ನೇ ಪರ್ಕಾಶ್ ಪೂರಬ್ ದಿನದಂದು ಬಿಡುಗಡೆಯಾಗಲಿದೆ. ಈ ಗೀತೆಗಳನ್ನು ಫ್ಲಾಷ್ ಡ್ರೈವ್ ಅಥವಾ ಪೆನ್ ಡ್ರೈವ್ ಮೂಲಕ ಪಡೆಯಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇವು ಲಭ್ಯವಿರಲಿವೆ.