ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ ಆದಾಯ ಪ್ರಸಕ್ತ ವರ್ಷ 900 ಕೋಟಿ ರೂಪಾಯಿ ತಲುಪಿದೆ. ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಮತ್ತು ಇತರ ಕೊಡುಗೆ ಇದರಲ್ಲಿ ಸೇರಿದೆ. ಏಳು ಬೆಟ್ಟಗಳ ಒಡೆಯ ತಿಮ್ಮಪ್ಪನ ದರ್ಶನಕ್ಕೆ ನವೆಂಬರ್ ತಿಂಗಳಲ್ಲಿ ದಾಖಲೆ ಮಂದಿ ಆಗಮಿಸಿದ್ದಾರೆ. 21 ಲಕ್ಷದ 16 ಸಾವಿರ ಮಂದಿ ದೇವರ ದರ್ಶನ ಪಡೆದಿದ್ದಾರೆ. ನವೆಂಬರ್ ಒಂದೇ ತಿಂಗಳಲ್ಲಿ 77 ಕೋಟಿ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ. ಭಕ್ತರು 803 ಕಿಲೋ ಚಿನ್ನ ಮತ್ತು 3852 ಕಿಲೋ ಬೆಳ್ಳಿಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.