ನವದೆಹಲಿ: ಮಮತಾ ಬ್ಯಾನರ್ಜಿ ಸಿಎಎಯಿಂದ ಹೆದರಿರುವುದೇಕೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಮಮತಾ ದೀದಿ ಕೋಲ್ಕತಾದಿಂದ ವಿಶ್ವಸಂಸ್ಥೆಗೆ ಹೋಗಿದ್ದಾರೆ. ಕೆಲ ವರ್ಷಗಳ ಹಿಂದೆ, ಸಂಸತ್ತಿನಲ್ಲಿ ಅವರು ಬಾಂಗ್ಲಾದೇಶದಿಂದ ಬಂಗಾಳಕ್ಕೆ ಬರುವ ಬಾಂಗ್ಲಾ ನುಸುಳುಕೋರರನ್ನು ತಡೆಯುವಂತೆ ಮೊರೆ ಇಡುತ್ತಿದ್ದರು. ದೀದಿ ನಿಮಗೇನಾಯಿತು? ನೀವೇಕೆ ಬದಲಾದಿರಿ? ವದಂತಿಗಳನ್ನೇಕೆ ಹಬ್ಬಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ.
ಚುನಾವಣೆ ಬರುತ್ತದೆ, ಹೋಗುತ್ತದೆ…ನೀವೇಕೆ ಹೆದರಿದ್ದೀರಿ? ಎಂದು ಕೂಡ ಮೋದಿ ಲೇವಡಿ ಮಾಡಿದ್ದಾರೆ.
‘ದೀದಿ ನೀವೇಕೆ ಹೆದರಿದ್ದೀರಿ’ ಮಮತಾಗೆ ಮೋದಿ ಪ್ರಶ್ನೆ
Follow Us