ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮತ್ತೊಮ್ಮೆ ಅಪಾಯದ ಮಟ್ಟ ಮೀರಿದ್ದು,ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಶಾಲೆಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ.

ಪರಿಸರ ಮಾಲಿನ್ಯ ನಿವಾರಣಾ ಮತ್ತು ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಶುದ್ಧ ಇಂಧನದಿಂದ ಕಾರ್ಯನಿರ್ವಹಿಸದ ಕೈಗಾರಿಕೆಗಳನ್ನು ಶುಕ್ರವಾರದವರೆಗೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ. ಫರೀದಾಬಾದ್, ಗುರುಗ್ರಾಮ, ನೋಯಿಡಾ, ಪಾನಿಪಟ್ ಪ್ರದೇಶಗಳಲ್ಲಿರುವ ನೈಸರ್ಗಿಕ ಇಂಧನಕ್ಕೆ ವರ್ಗಾವಣೆ ಹೊಂದದ ಕಲ್ಲಿದ್ದಲು ಮತ್ತು ಇತರ ಇಂಧನಗಳನ್ನು ಆಧರಿಸಿದ ಕೈಗಾರಿಕೆಗಳು ನ.15ರವರೆಗೆ ಸ್ಥಗಿತಗೊಳ್ಳಲಿದೆ ಎಂದು ಅದು ತಿಳಿಸಿದೆ.