ನವದೆಹಲಿ; ಸಿಎಎ ಪ್ರತಿಭಟನೆ ಸಂಬಂಧ ಜಾಮೀಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ ಟ್ವೀಟ್ ಮಾಡಿ ಟ್ರೋಲ್ ಗೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ, ಕೋಚ್ ಇರ್ಫಾನ್ ಪಠಾನ್ ತಮ್ಮ ಹೇಳಿಕೆಯನ್ನು ಸರ್ಮಥಿಸಿಕೊಂಡಿದ್ದಾರೆ.
ಇದು ನನ್ನ ದೇಶ. ಇಲ್ಲಿ ನನಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂಪೂರ್ಣ ಹಕ್ಕಿದೆ. ಅದನ್ನು ಯಾರೊಬ್ಬರೂ ಹತ್ತಿಕ್ಕಲಾರರು ಎಂದು ಇರ್ಫಾನ್ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ್ದಾರೆ.