ನವದೆಹಲಿ: 2019 ರ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವಾಗಿದ್ದು, ಇದರಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) 19,592 ಕೋಟಿ ರೂ, ರಾಜ್ಯ ಸರಕು ಮತ್ತು ಸೇವಾ ತೆರಿಗೆ ( ಎಸ್‌ಜಿಎಸ್‌ಟಿ) 27,144 ಕೋಟಿ ರೂ, ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) 49,028 ಕೋಟಿ ರೂ ಸೇರಿದೆ.
ಐಜಿಎಸ್‌ಟಿಯಡಿ ಆಮದು ಮೇಲೆ ಸಂಗ್ರಹಿಸಿದ 20,948 ಕೋಟಿ ರೂ ಪೈಕಿ, 7,727 ಕೋಟಿ ರೂ. ಹೆಚ್ಚುವರಿ ಕರ(ಆಮದಿನ ಮೇಲೆ ಸಂಗ್ರಹಿಸಿದ 869 ಕೋಟಿ ರೂ. ಸೇರಿದಂತೆ) ಸೇರಿದೆ.
2019 ರ ನವೆಂಬರ್ ತಿಂಗಳಲ್ಲಿನ ಸಂಗ್ರಹವು ಜಿಎಸ್‍ಟಿ ಜಾರಿಗೊಳಿಸಿದ ನಂತರದ ಮೂರನೇ ಅತಿ ಹೆಚ್ಚು ಮಾಸಿಕ ಸಂಗ್ರಹವೆನಿಸಿದೆ. ಕಳೆದ ಏಪ್ರಿಲ್ ಮತ್ತು ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಸಂಗ್ರಹವಾಗಿತ್ತು.