ಅಹಮದಾಬಾದ್; ಸ್ವಯಂ ಘೋಷಿತ ನಿತ್ಯಾನಂದ ಸ್ವಾಮೀಜಿ ಅವರ ಗುಜರಾತ್ ನ ಅಹಮದಾಬಾದ್ ನಲ್ಲಿರುವ ಆಶ್ರಮವನ್ನು ಸ್ಥಳೀಯ ಆಡಳಿತ ಸಿಬ್ಬಂದಿ ನೆಲಸಮಗೊಳಿಸಿದ್ದಾರೆ.
ಕಳೆದ ತಿಂಗಳು ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಶ್ರಮದ ಇಬ್ಬರು ಮಹಿಳಾ ಆಡಳಿತಗಾರರನ್ನು ಬಂಧಿಸಲಾಗಿದೆ.
ಬೆಂಗಳೂರು ಮೂಲದ ಜನಾರ್ಧನ ಶರ್ಮಾ ಎಂಬುವರ ದೂರಿನ ಆಧಾರದ ಮೇಲೆ ಆಶ್ರಮದಲ್ಲಿದ್ದ ಅವರ ಮಕ್ಕಳಾದ ಪ್ರಾಣಪ್ರಿಯಾ ಮತ್ತು ಪ್ರಿಯಾತತ್ವ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.