ತಿರುಮಲ: ಪಿಎಸ್‍ಎಲ್‍ವಿ-ಸಿ 48 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಸಿವನ್ ಮಂಗಳವಾರ ಸಿದ್ಧ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
628 ಕೆ.ಜಿ. ತೂಕದ ಭೂ ಪರಿವೀಕ್ಷಣಾ ಉಪಗ್ರಹ ರಿಸ್ಯಾಟ್-2ಬಿ ಆರ್ ಐ ಮತ್ತು ಇತರ 9 ವಾಣಿಜ್ಯ ಉಪಗ್ರಹಗಳನ್ನು ತಮ್ಮ ಕಕ್ಷೆಗೆ ಹಾರಿಸುವ ಪಿಎಸ್‍ಎಲ್‍ವಿ-ಸಿ 48 ಉಡಾವಣೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರ ಸಜ್ಜಾಗಿದೆ. ಬುಧವಾರ(ಡಿ 11)ರಂದು ಸಂಜೆ 3.25ಕ್ಕೆ ಉಪಗ್ರಹ ರಿಸ್ಯಾಟ್-2ಬಿ ಆರ್ ಐ ಅನ್ನು ಪಿಎಸ್‍ಎಲ್‍ವಿ- ಸಿ48 ರಾಕೆಟ್ ಮೂಲಕ ಉಡಾಯಿಸಲಾಗುವುದು.
ಪಿಎಸ್‍ಎಲ್‍ವಿ-ಸಿ 48 ಉಡಾವಣೆಗೆ ಕ್ಷಣಗಣನೆ:
Follow Us