ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಇಂದು ಶಿವಸೇನೆ ನಾಯಕರು ಸಭೆ ನಡೆಸಲಿದ್ದಾರೆ. ಬಿಜೆಯೊಂದಿಗೆ ಸರ್ಕಾರ ರಚನೆ ಬಗ್ಗೆ ಇಂದು ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಚುನಾವಣೆ ಫಲಿತಾಂಶದ ಬಳಿಕ ಶಿವಸೇನೆ-ಬಿಜೆಪಿ ನಡುವೆ ಅಧಿಕಾರ ಹಂಚಿಕೆ ಕುರಿತು ಪರಸ್ಪರ ವಾಗ್ವಾದ ನಡೆದಿವೆ. ಚುನಾವಣೆಯಲ್ಲಿ ೫೬ ಸ್ಥಾನ ಗೆದ್ದಿರುವ ಶಿವಸೇನೆ ೫೦:೫೦ ಸೂತ್ರದಡಿ ಸಮ್ಮಿಶ್ರ ಸರ್ಕಾರ ರಚಿಸಲು ಬಯಸುತ್ತಿದೆ. ಒಂದು ವೇಳೆ ಶಿವಸೇನೆ ಮಾತಿಗೆ ಬಿಜೆಪಿ ಒಪ್ಪಿದರೆ ಮಹಾರಾಷ್ಟ್ರದಲ್ಲಿ ತಲಾ ೨.೫ ವರ್ಷ ಒಬ್ಬರು ಸಿಎಂ ಅಧಿಕಾರ ನಡೆಸಲಿದ್ದಾರೆ.
ನಿನ್ನೆ ಬಿಜೆಪಿಯವರು ಸಭೆ ಸೇರಿ ದೇವೇಂದ್ರ ಫಡ್ನವೀಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇಂದು ಶಿವಸೇನೆ ಮುಖಂಡರು ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಏಕನಾಥ ಶಿಂಧೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.