ದೆಹಲಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂಬ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಅವರ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ಈ ಮೂಲಕ ಮಹಾರಾಷ್ಟ್ರದಲ್ಲಿ ಅಧಿಕೃತವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.
ರಾಜ್ಯಪಾಲರ ಶಿಫಾರಸಿಗೆ ಕೇಂದ್ರ ಸಚಿವ ಸಂಪುಟವೂ ಸಮ್ಮತಿ ಸೂಚಿಸಿತ್ತು. ಈ ಮಧ್ಯೆ, ರಾಷ್ಟ್ರಪತಿ ಆಡಳಿತ ಜಾರಿ ವಿರುದ್ದ ಶಿವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಶಿವಸೇನೆ ಅರ್ಜಿ ಸಲ್ಲಿಸಿದೆ.
ರಾಷ್ಟ್ರಪತಿ ಆಳ್ವಿಕೆ ಜಾರಿ ಬಳಿಕವೂ ಸರ್ಕಾರ ರಚನೆಗೆ ಎನ್ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಕಸರತ್ತು ಮುಂದುವರಿಸಿದ್ದು, ವಿಭನ್ನ ಸಿದ್ಧಾಂತಗಳನ್ನೊಳಗೊಂಡ ಈ ಮೂರೂ ಪಕ್ಷಗಳ ನಾಯಕರು ಪರಸ್ಪರ ಮಾತುಕತೆ ಮುಂದುವರಿಸಿದ್ದಾರೆ.