* ಶಿವಸೇನೆಯ ಸಿಎಂ ಗಾದಿ ಕನಸು ಭಗ್ನ
ಮುಂಬೈ:
ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಹಸನ ಇನ್ನೂ ಮುಂದುವರಿದಿದೆ.ಅಚ್ಚರಿಯ ಬೆಳವಣಿಗೆಯಲ್ಲಿ ಶಿವಸೇನೆ ನಿಗದಿತ ಅವಧಿಯಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವಲ್ಲಿ ವಿಫಲವಾಗಿದ್ದು, ಸರ್ಕಾರ ರಚಿಸುವಂತೆ ಮೂರನೇ ಅತಿದೊಡ್ಡ ಪಕ್ಷ ಎನ್ಸಿಪಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ.ಈ ಮೂಲಕ ಸಿಎಂ ಪಟ್ಟಕ್ಕೇರುವ ಶಿವಸೇನೆಯ ಕನಸು ಭಗ್ನವಾಗಿದೆ. ಎನ್ಸಿಪಿ ಬೆಂಬಲ ಪತ್ರ ಸಲ್ಲಿಸಲು ಹಾಗೂ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರಿಂದ ಸಂಜೆ 7:30 ಗಡುವು ಪಡೆದುಕೊಂಡಿದ್ದ ಶಿವಸೇನೆ, ನಿಗದಿತ ಅವಧಿಯೊಳಗೆ ಬೆಂಬಲಪತ್ರ ನೀಡುವಲ್ಲಿ ಮತ್ತು ಸರ್ಕಾರ ರಚನೆಗೆ ಹಕ್ಕು ಮಂಡಿಸುವಲ್ಲಿ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಸರ್ಕಾರ ರಚಿಸುವಂತೆ ಎನ್ ಸಿಪಿಗೆ ಆಹ್ವಾನ ನೀಡಿದ್ದಾರೆ.
