ನವದೆಹಲಿ: ಮುಂದಿನ ದಿನಗಳಲ್ಲಿ ಹಲವು ಅಗತ್ಯ ವಸ್ತು ಮತ್ತು ಸೇವೆ ದುಬಾರಿಯಾಗಲಿದೆ. ಜಿಎಸ್ ಟಿ ಸ್ಲಾಬ್ ನಲ್ಲಿರುವ ಶೇಕಡ 5ನ್ನು ರದ್ದುಪಡಿಸಿ ಅದರ ಬದಲಿಗೆ ಶೇಕಡ 9 ಅಥವಾ 10ನ್ನು ಜಾರಿಗೊಳಿಸುವ ಚಿಂತನೆ ನಡೆದಿದೆ. ಇದರ ಪರಿಣಾಮ ಶೇಕಡ 5ರಲ್ಲಿದ್ದ ಸರಕು ಮತ್ತು ಸೇವೆಗಳು ಹೊಸ ದರ ಪಟ್ಟಿಗೆ ಸೇರಲಿವೆ. ಸಹಜವಾಗಿಯೇ ದರ ಹೆಚ್ಚಳವಾಗಲಿದೆ. ಎಕನಾಮಿ ದರ್ಜೆಯ ವಾಯು ಯಾನ, ರೈಲ್ವೇ ಎರಡನೇ ಮತ್ತು ಮೂರನೇ ಶ್ರೇಣಿಯ ಎಸಿ ಪ್ರಯಾಣ, ಬ್ರಾಂಡೆಡ್ ದ್ವಿದಳ ಧಾನ್ಯ, ಫಿಜಾ, ಬರ್ಗ್ ರ್, ಪುರುಷರ ಸೂಟ್, ಹೋಟೆಲ್ ತಿಂಡಿ, ಕ್ಯಾಟರಿಂಗ್ ಸೇವೆ ತುಟ್ಟಿಯಾಗುವ ಸಾಧ್ಯತೆಗಳಿವೆ. ಸರ್ಕಾರಕ್ಕೆ ಇದರಿಂದ ಒಂದು ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ