ಅಹ್ಮದಾಬಾದ್: ಪ್ರಸಿದ್ಧ ಸಂಗೀತ ಸಂಯೋಜಕ ಶೇಖರ್ ರವಿಜಿಯಾನಿ ಅವರಿಗೆ 3 ಬೇಯಿಸಿದ ಮೊಟ್ಟೆಗಳಿಗೆ 1672 ರೂಗಳ ಬಿಲ್ ಮಾಡಿದ ಅಹಮದಾಬಾದ್‌ನ ಹಯಾಟ್ ಪಂಚತಾರಾ ಹೋಟೆಲ್ ಭಾರಿ ಸುದ್ದಿಗೆ ಗ್ರಾಸವಾಗಿದೆ.
ಅನೇಕ ಸೂಪರ್-ಹಿಟ್ ಹಾಡುಗಳನ್ನು ರಚಿಸಿರುವ 41 ವರ್ಷದ ಸಂಯೋಜಕ ನಿನ್ನೆ ಸಂಜೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ‘3 ಮೊಟ್ಟೆಯ ಬಿಳಿಭಾಗಕ್ಕೆ 1672 ರೂ. ಬಿಲ್ ಪಾವತಿಸಿದ್ದೇನೆ’ ಎಂದು ಬರೆದುಕೊಂಡಿದ್ದು, ಹೋಟೆಲ್ ಬಿಲ್ ಅನ್ನೂ ಹಂಚಿಕೊಂಡಿದ್ದಾರೆ.
ಈ ಹೋಟೆಲ್ 3 ಮೊಟ್ಟೆಗಳಿಗೆ 1350 ರೂ. ಮತ್ತು ಜಿಎಸ್‌ಟಿ ಸೇರಿದಂತೆ ಒಟ್ಟು ಬಿಲ್ 1672 ರೂ. ದರ ವಿಧಿಸಿದೆ.