ನವದೆಹಲಿ: ತಮ್ಮ ಮೇಲಿನ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಪಾಸ್ ಪೋರ್ಟ್ ಅರ್ಜಿಯಲ್ಲಿ ಮರೆಮಾಚಿದ್ದಕ್ಕೆ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ವಿರುದ್ದ ಮುಂಬೈ ಪಾಸ್ ಪೋರ್ಟ್ ಕಚೇರಿ ಕ್ರಮಕ್ಕೆ ಮುಂದಾಗಿದೆ.
ಈ ಸಂಬಂಧ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿರುವ ಪಾಸ್ ಪೋರ್ಟ್ ಅಧಿಕಾರಿಗಳು, ನರ್ಮದಾ ಉಳಿಸಿ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ವಿಚಾರಣೆಗೊಳಪಡಿಸಲು ಅನುಮತಿ ಕೇಳಿದ್ದಾರೆ.
ಪತ್ರಕರ್ತರೊಬ್ಬರು 2019ರ ಜೂನ್ನಲ್ಲಿ ಈ ಬಗ್ಗೆ ಮೇಧಾ ವಿರುದ್ಧ ದೂರು ದಾಖಲಿಸಿದ್ದರು. ದೂರಿನಲ್ಲಿ ಮೇಧಾ ಪಾಟ್ಕರ್ ವಿರುದ್ಧ 9 ಕ್ರಿಮಿನಲ್ ಪ್ರಕರಣಗಳಿರುವ ಬಗ್ಗೆ ಸಾಕ್ಷಿಗಳನ್ನು ನೀಡಲಾಗಿತ್ತು.
2017ರ ಮಾರ್ಚ್ 30ರಂದು ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಮೇಧಾ ಪಾಟ್ಕರ್, ತನ್ನ ವಿರುದ್ಧ ಯಾವ ಕ್ರಿಮಿನಲ್ ಪ್ರಕರಣಗಳು ಇಲ್ಲ ಎಂದು ಅರ್ಜಿಯಲ್ಲಿ ಭರ್ತಿ ಮಾಡಿದ್ದರು.
ಮೇಧಾ ಪಾಟ್ಕರ್ ವಿಚಾರಣೆಗೆ ಕೇಂದ್ರದ ಅನುಮತಿ ಕೋರಿದ ಪಾಸ್ಪೋರ್ಟ್ ಕಚೇರಿ
Follow Us