ನವದೆಹಲಿ: ಸಂಗೀತ ದಿಗ್ಗಜ, ಗಾನಗಂಧರ್ವ ಪದ್ಮವಿಭೂಷಣ ಡಾ.ಕೆ.ಜೆ.ಯೇಸುದಾಸ್ ಅವರ 80ನೇ ಜನ್ಮದಿನ ಇಂದು. 6 ದಶಕಗಳಿಂದ ತಮ್ಮ ಸುಮಧುರ ಕಂಠದಿಂದಲೇ ವಿಶ್ವಾದ್ಯಂತ ಸಂಗೀತ ಪ್ರಿಯರನ್ನು ಮುದಗೊಳಿಸುತ್ತಿರುವ ಯೇಸುದಾಸ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಗಣ್ಯರು, ಅಭಿಮಾನಿಗಳು ಯೇಸುದಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಸುದೀರ್ಘ ಆರೋಗ್ಯಯುತ ಜೀವನ ದೊರಕಲಿ
80ನೇ ಹುಟ್ಟುಹಬ್ಬದ ಸುದಿನದಂದು ಬಹುಮುಖ ಪ್ರತಿಭೆ ಯೇಸುದಾಸ್ ಅವರಿಗೆ ಶುಭ ಕೋರುತ್ತೇನೆಂದು ಪ್ರಧಾನಿ ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಯೇಸುದಾಸ್ ಜನ್ಮದಿನ; ಶುಭಾಶಯಗಳ ಮಹಾಪೂರ
Follow Us