ನವದೆಹಲಿ: 2021 ರ ಜನಗಣತಿ ನಡೆಸಲು 8 ಸಾವಿರ ಕೋಟಿ ರೂಪಾಯಿ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ರಾಷ್ಟ್ರೀಯ ಜನಸಂಖ್ಯೆನೋಂದಣಿ- ಎನ್ ಆರ್ ಪಿ ನವೀಕರಣಗೊಳಿಸಲು ಸಹ ಒಪ್ಪಿಗೆ ಸೂಚಿಸಿದೆ. ಭಾರತೀಯ ಜನಗಣತಿ ದೇಶದ ಎಲ್ಲ ಜನಸಂಖ್ಯೆಯನ್ನು ಒಳಗೊಳ್ಳಲಿದೆ, ಎನ್ ಪಿ ಆರ್ ಅಸ್ಸಾಂ ಹೊರತು ಪಡಿಸಿ ದೇಶದ ಎಲ್ಲ ಪ್ರದೇಶದ ಜನಸಂಖ್ಯೆಯನ್ನು ಒಳಗೊಳ್ಳಲಿದೆ .