Saturday, June 10, 2023

ರೈಲು ಆಹಾರ ಮತ್ತಷ್ಟು ತುಟ್ಟಿ

Follow Us

ನವದೆಹಲಿ: ರೈಲುಗಳಲ್ಲಿನ ಆಹಾರ ಮತ್ತಷ್ಟು ತುಟ್ಟಿಯಾಗಿದೆ. ಕೇಂದ್ರ ರೈಲ್ವೆ ಸಚಿವಾಲಯ‌ ರೈಲು‌ ನಿಲ್ದಾಣಗಳ ಸ್ಥಿರ ಘಟಕಗಳಲ್ಲಿನ ಆಹಾರ ದರವನ್ನು ಪರಿಷ್ಕರಿಸಿದೆ.
ಮಂಗಳವಾರ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಷನ್(ಐಆರ್ಸಿಟಿಸಿ) ಈ ಬಗ್ಗೆ‌ ಮಾಹಿತಿ‌ ನೀಡಿದೆ.
ಎಕ್ಸ್ ಪ್ರೆಸ್ ಹಾಗೂ‌ಮೇಲ್ ರೈಲುಗಳಲ್ಲಿ ಪರಿಷ್ಕೃತ ಸೇವಾ ದರ ಹೀಗಿದೆ..
* ವೆಜ್ ಬ್ರೇಕ್ಫಾಸ್ಟ್- 35 ರೂ.
* ನಾನ್ ವೆಜ್ ಬ್ರೇಕ್ಫಾಸ್ಟ್- 45 ರೂ.
* ಸಸ್ಯಾಹಾರಿ ಊಟ- 70
* ಊಟ(ಎಗ್ ಕರಿ)- 80
* ಊಟ( ಚಿಕನ್ ಕರಿ)- 120
* ವೆಜ್ ಬಿರಿಯಾನಿ(350 ಗ್ರಾಂ)- 70
* ಎಗ್ ಬಿರಿಯಾನಿ(350 ಗ್ರಾಂ)- 80
* ಚಿಕನ್ ಬಿರಿಯಾನಿ(350 ಗ್ರಾಂ)- 100
* ಸ್ನ್ಯಾಕ್ ಮೀಲ್(350 ಗ್ರಾಂ)- 150 ರೂ.
ರಾಜಧಾನಿ, ಶತಾಬ್ದಿ ಮತ್ತು ತುರಂತೋ ರೈಲುಗಳಲ್ಲಿನ ಪರಿಷೃತ ಸೇವಾ ದರ ಹೀಗಿದೆ.
ಬ್ರೇಕ್ಫಾಸ್ಟ್ ದರ 140 ರೂ. ಆಗಲಿದೆ. ಈ ಮೂರು ರೈಲುಗಳ ಎಸಿ ಫಸ್ಟ್, ಎಸಿ ಸೆಕೆಂಡ್ ಮತ್ತು ಎಸಿ ಥರ್ಡ್ಗಳಲ್ಲಿ 105 ರೂ. ತಗುಲುತ್ತದೆ. ರಾತ್ರಿ ಊಟಕ್ಕೆ ಎಸಿ ಫಸ್ಟ್ನಲ್ಲಿ 245 ರೂ., ಎಸಿ ಸೆಕೆಂಡ್ ಮತ್ತು ಎಸಿ ಥರ್ಡ್ನಲ್ಲಿ 185 ರೂ. ಪಾವತಿಸಬೇಕಾಗುತ್ತದೆ. ಸಾಯಂಕಾಲದ ಟೀ ಎಸಿ ಫಸ್ಟ್ನಲ್ಲಿ 140 ರೂ. ಮತ್ತು ಎಸಿ ಸೆಕೆಂಡ್ ಮತ್ತು ಥರ್ಡ್ನಲ್ಲಿ 90 ರೂ. ತಗಲುತ್ತದೆ. ತುರಂತೋ ಟ್ರೈನ್ನ ಸ್ಲೀಪರ್ ಕ್ಲಾಸ್ ಪ್ರಯಾಣಿಕರಿಗೆ ಬ್ರೇಕ್ ಫಾಸ್ಟ್ 65 ರೂ. ಮಧ್ಯಾಹ್ನ ಮತ್ತು ರಾತ್ರಿ ಊಟ 120 ರೂ. ಮತ್ತು ಸಾಯಂಕಾಲದ ಟೀ ಗೆ 50 ರೂ. ನಿಗದಿಗೊಳಿಸಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
- Advertisement -
error: Content is protected !!