ನವದೆಹಲಿ: ರೈಲ್ವೆ ಟಿಕೆಟ್ ಕಾಯ್ದಿರಿಸುವಲ್ಲಿ ಏಜೆಂಟರ ಹಾವಳಿ ತಡೆಯಲು ಮುಂದಾಗಿರುವ ಐಆರ್ ಸಿಟಿಸಿ ನ್ಯಾಯಬದ್ಧವಾಗಿ ಟಿಕೆಟ್ ಕಾಯ್ದಿರಿಸಿ ನಂತರ ಅದನ್ನು ರದ್ದುಗೊಳಿಸಿದವರಿಗೆ ಹಣ ಮರುಪಾವತಿ ಕುರಿತು ಖಚಿತ ಮಾಹಿತಿ ಒದಗಿಸಲು ನೂತನ ಪಾಸ್ ವರ್ಡ್ ಆದಾರಿತ ವ್ಯವಸ್ಥೆ ಜಾರಿಗೊಳಿಸಿದೆ.
ಈ ವ್ಯವಸ್ಥೆಯಲ್ಲಿ ಟಿಕೆಟ್ ರದ್ದುಗೊಳಿಸಿದ ನಂತರ ಅದರ ಏಜೆಂಟ್ ಗೆ ಮರುಪಾವತಿಯಾದ ಹಣದ ಮಾಹಿತಿ ಟಿಕೆಟ್ ಕಾಯ್ದಿರಿಸಿದವರಿಗೆ ಲಭ್ಯವಾಗಲಿದೆ. ಆದರೆ, ಇದು ವೇಯ್ಟಿಂಗ್ ಲೀಸ್ಟ್ ನಲ್ಲಿದ್ದ ಮತ್ತು ಕನ್ಫರ್ಫ್ ಆಗದ ಹಾಗೂ ಇ-ಟಿಕೆಟ್ ಗಳಿಗೆ ಸೀಮಿತವಾಗಿದೆ. ಕಾಯ್ದಿರಿಸಿದ ಟಿಕೆಟ್ ಗಳಿಗೆ ರೈಲ್ವೆ ಇಲಾಖೆಯ ಟಿಕೆಟ್ ಕೌಂಟರ್ ಗಳಲ್ಲಿ ರದ್ದುಗೊಳಿಸಲು ಸಾಧ್ಯವಿಲ್ಲ.
ಇದರಲ್ಲಿ ಗ್ರಾಹಕರು ಟಿಕೆಟ್ ರದ್ದುಗೊಳಿಸಿದ ನಂತರ ಅದರ ಹಣ ಮರುಪಾವತಿ ಕುರಿತು ಅವರು ಟಿಕೆಟ್ ಕಾಯ್ದಿರಿಸುವಾಗ ನೀಡಿದ್ದ ಮೊಬೈಲ್ ಫೋನ್ ಸಂಖ್ಯೆಗೆ ಎಸ್ ಎಂಎಸ್ ರೂಪದಲ್ಲಿ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ಏಜೆಂಟರಿಗೆ ನೀಡಿದಾಗ ಮಾತ್ರ ಮರುಪಾವತಿ ಪ್ರಕ್ರಿಯೆ ಆರಂಭವಾಗುತ್ತದೆ.