ಮುಂಬೈ: ತನ್ನ ತಾಯಿಯ ದೀರ್ಘಕಾಲಿಕ ಕಾಯಿಲೆಯಿಂದ ಬೇಸತ್ತ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವ್ಯಕ್ತಿಯೋರ್ವ ಆಕೆಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಆಕೆಯ ಕಿರಿಯ ಮಗ ದೂರು ದಾಖಲಿಸಿದ್ದು, ವಿಚಾರಣೆ ವೇಳೆ, ಆರೋಪಿ, ತನ್ನ ತಾಯಿ ಯಾವಾಗಲೂ
ಕಾಯಿಲೆಯಿಂದ ಬಳಲುತ್ತಿದ್ದರಿಂದ ಆಕೆಗೆ ‘ಮುಕ್ತಿ’ ಕೊಡಿಸುವ ಉದ್ದೇಶದಿಂದ ಹತ್ಯೆ ಮಾಡಿದ್ದಾಗಿ
ಹೇಳಿಕೆ ನೀಡಿದ್ದಾನೆ. ಆತನ ವಿರುದ್ಧ ಐಪಿಸಿ 302 (ಕೊಲೆ) ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ
ಎಂದು ಪೊಲೀಸರು ತಿಳಿಸಿದ್ದಾರೆ.