
ಮುಂಬೈ: ಭಾರತದ ನೈಟಿಂಗೇಲ್ ಎಂದೇ ಖ್ಯಾತರಾದ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆ ಮೂಲಗಳು ತಿಳಿಸಿವೆ.ಉಸಿರಾಟದ ತೊಂದರೆಯಿಂದ ಬಳಲುತ್ತಿರುವ 90 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಅವರನ್ನು ಸೋಮವಾರ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯುಮೋನಿಯಾದಿಂದಲೂ ಲತಾ ಬಳಲುತ್ತಿದ್ದು, ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೀವರಕ್ಷಕ ಸಾಧನಗಳನ್ನು ಅಳವಡಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆಯಿದ್ದರೂ ಪರಿಸ್ಥಿತಿ ಗಂಭೀರವಾಗಿದೆ ಎಂದು ಡಾ. ಪ್ರತಿತ್ ಸಾಮ್ದಾನಿ ತಿಳಿಸಿದ್ದಾರೆ. ಹೃದಯದ ಕಾರ್ಯಚರಣೆಯಲ್ಲೂ ಏರುಪೇರಾಗಿದ್ದು, ಹೃದಯದಿಂದ ಸಮರ್ಪಕವಾಗಿ ರಕ್ತ ರವಾನೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ.