Thursday, December 7, 2023

ವಂಚನೆ: ಕಣ್ವ ಗ್ರೂಪ್ ಮಾಲೀಕ ಬಂಧನ

Follow Us

ಬೆಂಗಳೂರು: ಹೂಡಿಕೆದಾರರಿಗೆ ವಂಚನೆ ಹಿನ್ನೆಲೆಯಲ್ಲಿ ಕಣ್ವ ಗ್ರೂಪ್ ಮಾಲೀಕ ನಂಜುಂಡಯ್ಯ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಣ್ವ ಗ್ರೂಪ್ ನ ಕಣ್ವ ಕೋ ಆಪರೇಟಿವ್ ಸೊಸೈಟಿ ತನ್ನ ಗ್ರಾಹಕರಿಗೆ ಸೈಟ್ ಕೊಡಿಸುವುದಾಗಿ ಹೇಳಿ ನಿವೇಶನವನ್ನೂ ನೀಡದೆ, ಸಾವಿರಾರು ಕೋಟಿ ರೂ.ಗಳನ್ನೂ ಮರಳಿಸದೆ ವಂಚಿಸಿದೆ ಎಂಬ ಆರೋಪದಡಿ ತನಿಖೆ ಕೈಗೊಂಡಿದ್ದ ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು‌ ಶುಕ್ರವಾರ ಬಂಧಿಸಿದ್ದಾರೆ. ನಿವೇಶನ ಕೊಡಿಸುವುದಾಗಿ ತನ್ನಿಂದ 16 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಮುನಿಯಪ್ಪ ಎಂಬುವರು ಪೊಲೀಸರಿಗೆ ದೂರು ‌ನೀಡಿದ್ದರು. ನಂಜುಂಡಯ್ಯ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರರಾವ್ ಸೂಚನೆ‌ ಮೇರೆಗೆ ಈ ಪ್ರಕರಣ ಇಂದು ಸಂಜೆ ಸಿಸಿಬಿಗೆ ವರ್ಗಾವಣೆಯಾಗಲಿದೆ.

ಮತ್ತಷ್ಟು ಸುದ್ದಿಗಳು

vertical

Latest News

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF)...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...

ಊಟ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಿತ್ತು ಚಾಟಿ ಏಟು

newsics.com ಹಾವೇರಿ : ಊಟ ಕೇಳಿದ ವಿಧ್ಯಾರ್ಥಿಗಳಿಗೆ ವಾರ್ಡನ್ ಚಾಟಿ ಏಟು ಕೊಟ್ಟಿರುವಂತಹ ಅಮಾನವೀಯ ಘಟನೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ...
- Advertisement -
error: Content is protected !!