ಬೆಂಗಳೂರು; ನೀವು ಹೊಸ ಕಾರು ಕೊಳ್ಳಬಯಸುತ್ತಿದ್ದಿರೇನು? ಹಾಗಾದರೆ ಇದು ಸುಸಮಯ. ವರ್ಷಾಂತ್ಯದಲ್ಲಿ ಪ್ರಮುಖ ಸಂಸ್ಥೆಗಳು ರಿಯಾಯ್ತಿ ದರದಲ್ಲಿ ಕಾರು ಮಾರಾಟಕ್ಕೆ ಮುಂದಾಗಿವೆ.
ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರ, ಹೋಂಡಾ, ಟಾಟಾ ಮೋಟಾರ್ಸ್ ಮತ್ತು ಫಿಯೆಟ್ ಕ್ರಿಸ್ಲರ್ ಕಂಪನಿಗಳು ಹಲವು ಪ್ರೋತ್ಸಾಹ ಯೋಜನೆಗಳಡಿ 10 ಸಾವಿರ ರೂ.ಗಳಿಂದ 1.77 ಲಕ್ಷ ರೂ.ಗಳವರೆಗೆ ರಿಯಾಯ್ತಿ ನೀಡಲು ಮುಂದಾಗಿದೆ. ಕಂಪನಿಗಳು ಕಾರಿನ ಮಾದರಿಗಳನ್ನು ಆಧರಿಸಿ 40 ಸಾವಿರ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ರಿಯಾಯ್ತಿಯ ಕೊಡುಗೆ ಘೋಷಿಸಿವೆ.