ನವದೆಹಲಿ; ದೇಶದ ಆರ್ಥಿಕ ಕುಸಿತದಿಂದ ತತ್ತರಿಸುವಾಗಲೇ ಕೇಂದ್ರ ಸರ್ಕಾರ ಹಣಕಾಸು ಇಲಾಖೆಯ ಕಾರ್ಯವೈಖರಿಯನ್ನು ಬಿಗಿಗೊಳಿಸಲು ಮುಂದಾಗಿದೆ. ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಸಿದ್ಧಾಂತದಡಿ ಸರ್ಕಾರಿ ಅಧಿಕಾರಿಗಳಿಗೆ ನಿರ್ದಿಷ್ಟ ಸಾಧನೆಯ ಗುಣಮಟ್ಟವನ್ನು ನಿಗದಿಪಡಿಸಲು ಮುಂದಾಗಿದೆ.
ಅದರಲ್ಲೂ ಪ್ರಮುಖವಾಗಿ ಹಣಕಾಸು ನಿರ್ವಹಣಾ ವಿಭಾಗದಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ತಿಳಿಸಿದ್ಧಾರೆ. ಯಾವುದೇ ಕುಟುಂಬ, ಸಮಾಜ, ಸಂಸ್ಥೆ ಅಥವಾ ದೇಶಕ್ಕೆ ಹಣಕಾಸು ನಿರ್ವಹಣೆಯೇ ಬೆನ್ನೆಲುಬಾಗಿದ್ದು, ಅದನ್ನು ಸರಿಯಾಗಿ ನಿಭಾಯಿಸಬೇಕಿದೆ. ದೇಶದ ಒಟ್ಟಾರೆ ಬಜೆಟ್ ನ ನಾಲ್ಕನೇ ಒಂದು ಭಾಗವನ್ನು ಹೊಂದಿರುವ ರಕ್ಷಣಾ ಲೆಕ್ಕಪತ್ರಗಳಿಗೆ ಇದು ಅನ್ವಯಿಸುತ್ತದೆ ಎಂದಿದ್ದಾರೆ.