ಹೈದರಾಬಾದ್: ಹೈದರಾಬಾದ್ ನ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಯನ್ನು ರಾಜ್ಯ ಪೊಲೀಸರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿದ್ದಾರೆ.
ನಾಲ್ವರು ಆರೋಪಿಗಳು ಪಶುವೈದ್ಯೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಬಳಿಕ ಮೃತದೇಹ ಸುಟ್ಟಿರುವ ವಿವರಗಳನ್ನು ಈ ವರದಿ ಒಳಗೊಂಡಿದೆ.
ಈ ಮಧ್ಯೆ, ಚಟನ್‍ಪಲ್ಲಿಯಲ್ಲಿ ನಡೆದ ಎನ್ ಕೌಂಟರ್ ಕುರಿತಂತೆ ತೆಲಂಗಾಣ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದೆ.
ಸೈಬರಾಬಾದ್ ಸಾಮೂಹಿಕ ಅತ್ಯಾಚಾರ; ಪೊಲೀಸರಿಂದ ಎನ್‍ಎಚ್‍ಆರ್ ಸಿಗೆ ವರದಿ ಸಲ್ಲಿಕೆ
Follow Us