ನವದೆಹಲಿ: ಹಡಗುಗಳಲ್ಲಿ ಅಪಾಯಕಾರಿ ವಸ್ತುಗಳ ಬಳಕೆಯನ್ನು ನಿರ್ಬಂಧಿಸುವ ಮತ್ತು ಹಡಗುಗಳ ಮರುಬಳಕೆಯನ್ನು ನಿಯಂತ್ರಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ಧ್ವನಿ ಮತದ ಅಂಗೀಕಾರ ನೀಡಲಾಯಿತು.
ಹಡಗುಗಳ ಮರುಬಳಕೆ ಮಸೂದೆ 2019 ಅನ್ನು ಮೇಲ್ಮನೆಯಲ್ಲಿ ಹಡಗು ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಡಿಸಿದರು.
ಸದನದಲ್ಲಿ ಮಸೂದೆಯ
ಕುರಿತ ಚರ್ಚೆಗೆ ಉತ್ತರಿಸಿದ ಸಚಿವರು, ಹಡಗುಗಳ ಮರುಬಳಕೆ ಮಾಡುವಾಗ ಉದ್ಯೋಗಾವಕಾಶಗಳು,
ಕಾರ್ಮಿಕರ ಸುರಕ್ಷತೆ ಮತ್ತು ಮರುಬಳಕೆ ಕಾರ್ಯ ನಡೆಯುತ್ತಿರುವಾಗ ಪರಿಸರವನ್ನು
ಗಮನದಲ್ಲಿರಿಸಲಾಗುವುದು ಎಂದು ಸದಸ್ಯರಿಗೆ ಭರವಸೆ ನೀಡಿದರು.