ದೆಹಲಿ:
ಹರಿಯಾಣದ ಪಂಚಕುಲ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಪ್ರೀತ್ ಇನ್ಸಾನ್ ಗೆ ಪಂಚಕುಲ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಕೊಲೆ ಹಾಗೂ ಅತ್ಯಾಚಾರ ಅಪರಾಧಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ನ ದತ್ತುಪುತ್ರಿ ಹನಿಪ್ರೀತ್ 2017ರ ಅಕ್ಟೋಬರ್ ನಿಂದ ಅಂಬಾಲ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಹನಿಪ್ರೀತ್ ಇನ್ಸಾನ್ ಸೇರಿ ಇತರೆ 39 ಮಂದಿಯ ವಿರುದ್ಧ ದಾಖಲಾಗಿದ್ದ ರಾಜದ್ರೋಹ ಪ್ರಕರಣವನ್ನು ಪಂಚಕುಲ ಕೋರ್ಟ್ ಕೈಬಿಟ್ಟ ಬಳಿಕ ಜಾಮೀನು ಕೋರಿದ್ದ ಹಿನ್ನೆಲೆಯಲ್ಲಿ ಪಂಚಕುಲ ಕೋರ್ಟ್ ಹನಿಪ್ರೀತ್ ಗೆ ಜಾಮೀನು ಮಂಜೂರು ಮಾಡಿದೆ.
ಹನಿಪ್ರೀತ್ ಗೆ ಪಂಚಕುಲ ಕೋರ್ಟ್ ಜಾಮೀನು
Follow Us