
ನವದೆಹಲಿ; ಕಾರ್ಪೊರೇಟ್ ತೆರಿಗೆಗಳನ್ನು ಕಡಿತಗೊಳಿಸುವುದರ ಹಿಂದೆ ಹೂಡಿಕೆಯನ್ನು ಆಕರ್ಷಿಸುವ ಹಾಗೂ ಉದ್ಯೋಗ ಸೃಷ್ಟಿಯ ಉದ್ದೇಶವಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ತೆರಿಗೆ ಕಾನೂನುಗಳು (ತಿದ್ದುಪಡಿ) 2019 ಮಂಡಿಸಿದ ಅವರು ಸಿನೋ ಅಮೆರಿಕ ವ್ಯಾಪಾರ ಯುದ್ಧದ ಪರಿಣಾಮ ತನ್ನ ಗಮನವನ್ನು ಚೀನಾದಿಂದ ಬೇರೆಡೆಗೆ ಹರಿಸಯಬಯಸುತ್ತಿರುವ ರಾಷ್ಟ್ರೀಯ ಕಂಪನಿಗಳಿಂದ ಹೂಡಿಕೆಗಳನ್ನು ಆಕರ್ಷಿಸುವುದು ಅನಿವಾರ್ಯ ಎಂದು ವಿವರಿಸಿದರು.