ದೆಹಲಿ
ಆರ್ಥಿಕ ಕುಸಿತ ಹಿನ್ನೆಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ನಿರ್ಧರಿಸಿದೆ.
ಕಂಪನಿಯ ಈ ನಿರ್ಧಾರದಿಂದ ಹಿರಿಯ ಹಾಗೂ ಮಧ್ಯಮ ಶ್ರೇಣಿಯ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆಂದು ಇನ್ಫೋಸಿಸ್ ಮೂಲಗಳು ತಿಳಿಸಿವೆ. ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಇನ್ಫೋಸಿಸ್ ನಿರ್ಧರಿಸಿದ್ದು, ಉದ್ಯೋಗ ಶ್ರೇಣಿ 6 ಮತ್ತು ಉದ್ಯೋಗ ಶ್ರೇಣಿ 7 ಹಾಗೂ ಜಾಬ್ ಲೆವೆಲ್ 8ರ ಶ್ರೇಣಿಯಲ್ಲಿ ಒಟ್ಟು 30,092 ಉದ್ಯೋಗಿಗಳಿದ್ದಾರೆ. ಇವರಲ್ಲಿ ಜೆಲ್ 6 ಹಾಗೂ ಸಿನಿಯರ್ ಮ್ಯಾನೇಜರ್ ಲೆವೆಲ್ ನ ಒಟ್ಟು 2,200 ಉದ್ಯೋಗಿಗಳನ್ನು ವಜಾ ಮಾಡಲು ಕಂಪನಿ ನಿರ್ಧರಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಅಸೋಸಿಯೇಟ್ ಉದ್ಯೋಗಿಗಳಲ್ಲಿ ಉದ್ಯೋಗ ಶ್ರೇಣಿ 3 ಮತ್ತು ಅದಕ್ಕಿಂತ ಕೆಳಗಿನ ಹಂತದ ಹಾಗೂ ಜೆಎಲ್ 4, ಜೆಎಲ್ 5 ಹಂತದಲ್ಲಿ ಶೇ.2.5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಲಾಗಿದೆ. ಈ ಶ್ರೇಣಿಗಳಲ್ಲಿ ಒಟ್ಟು 86,558 ಉದ್ಯೋಗಿಗಳಿದ್ದು, ಅಸೋಸಿಯೇಟ್ ಮತ್ತು ಮಧ್ಯಮ ಶ್ರೇಣಿಯಲ್ಲಿ ಒಟ್ಟು 1.1 ಲಕ್ಷ ಉದ್ಯೋಗಿಗಳಿದ್ದಾರೆ.