ಲಕ್ನೋ: ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಹಿಂದೂ ನಿರಾಶ್ರಿತರ ಪಟ್ಟಿಯನ್ನು ಉತ್ತರಪ್ರದೇಶ ಸರ್ಕಾರ ಕೇಂದ್ರಕ್ಕೆ ರವಾನೆ ಮಾಡಿದೆ.
ಇದು ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ಪ್ರಕ್ರಿಯೆಗೆ ಕೇಂದ್ರ ಚಾಲನೆ ನೀಡಿದ ನಂತರ ಪಟ್ಟಿಯನ್ನು ಕಳಿಸಿದ ಮೊದಲ ರಾಜ್ಯವಾಗಿದೆ.
ರಾಜ್ಯದ ಆಗ್ರಾ, ರಾಯಬರೇಲಿ, ಗೋರಖ್ಪುರ, ರಾಂಪುರ, ಮುಝಫರ್ ನಗರ, ವಾರಣಾಸಿ, ಅಮೇಠಿ, ಝಾನ್ಸಿ, ಬಹರೀಚ್, ಲಖೀಂಪುರ ಖೇರಿ, ಲಕ್ನೋ ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಸುಮಾರು 40 ಸಾವಿರ ಮುಸ್ಲಿಮೇತರ ಅಕ್ರಮ ವಲಸಿಗರು ವಾಸವಾಗಿದ್ದಾರೆ ಎಂದು ವರದಿ ತಿಳಿಸಿದೆ.