ಟೋಕಿಯೋ: ಜಪಾನ್ ನ ಶೇ. 80ಕ್ಕೂ ಹೆಚ್ಚು ಜನರು ಮರಣದಂಡನೆ ಶಿಕ್ಷೆಗೆ ಸಹಮತ ವ್ಯಕ್ತಪಡಿಸಿದ್ದು, ಕೇವಲ ಶೇ. 9ರಷ್ಟು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅಲ್ಲಿನ ಸರ್ಕಾರ ನಡೆಸಿದ ಮನವಿ ತಿಳಿಸಿದೆ. ಮರಣದಂಡನೆ ರದ್ದುಗೊಳಿಸುವ ಕುರಿತು ದೇಶಾದ್ಯಂತ ನಡೆದ ಚರ್ಚೆ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಜನಮತದ ಸರ್ವೆ ನಡೆಸಿತ್ತು. ಸಂತ್ರಸ್ತರ ಮತ್ತು ಅವರ ಕುಟುಂಬದವರಿಗೆ ಕಿಂಚಿತ್ತಾದರೂ ನೆಮ್ಮದಿ ನೀಡಲು ಅಪರಾಧಿಗಳಿಗೆ ಮರಣದಂಡನೆ ಅಗತ್ಯ ಎಂದು ಶೇ. 57ರಷ್ಟು ಜನರು
ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 54ರಷ್ಟು ಜನರು, ಒಂದು ಸ್ವರೂಪದ ಅಪರಾಧಗಳಿಗೆ ಸೂಕ್ತ ಪ್ರತೀಕಾರವಾಗಿ ಮರಣದಂಡನೆ ಶಿಕ್ಷೆ ಅಗತ್ಯವಾಗಿದೆ ಎಂದಿದ್ದಾರೆ.
ಗಲ್ಲು ಶಿಕ್ಷೆಗೆ ಶೇ.80 ಜಪಾನೀಯರ ಸಹಮತ
Follow Us