ನವದೆಹಲಿ: ಕೊರೋನಾ ವೈರಸ್ ಸೋಂಕಿನ ಚಿಕಿತ್ಸೆಗಾಗಿ ಆಯುಷ್ ಇಲಾಖೆ ಮುಂದಾಗಿದ್ದು, ಶುಕ್ರವಾರದಿಂದ (ಮೇ 15) ಪ್ರಾಯೋಗಿಕ ಪರೀಕ್ಷೆ ಆರಂಭಿಸಲಿದೆ.
ಇದಕ್ಕಾಗಿ ನಾಲ್ಕು ವಿಧದ ಸಾಂಪ್ರದಾಯಿಕ ಔಷಧ ಸಂಯೋಜನೆಗಳನ್ನು ಆಯುಷ್ ಸಿದ್ಧಪಡಿಸಿದೆ ಎಂದು ಆಯುಷ್ ಸಚಿವ ಶ್ರೀಪಾದ್ ವೈ. ನಾಯಕ್ ತಿಳಿಸಿದ್ದಾರೆ.
ಕೊರೋನ ವೈರಸ್ ಸೋಂಕು ಗುಣಪಡಿಸಲು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯು ಒಂದು ಮಾರ್ಗವನ್ನು ಕಂಡುಹಿಡಿಯಲಿದೆಯೆಂದು ಎಂಬ ಭರವಸೆ ತನಗಿದೆಯೆಂದು ಸಚಿವರು ತಿಳಿಸಿದರು.
ಮುಂದಿನ ಮೂರು ತಿಂಗಳೊಳಗೆ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳು ದೊರೆಯಲಿವೆ ಎಂದು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‌ಐಆರ್)ಯ ಮಹಾನಿರ್ದೇಶಕ ಶೇಖರ್ ಮಾಂಡೆ ಹಾಗೂ ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ತಿಳಿಸಿದ್ದಾರೆ.
ಕೊರೋನಾ ವೈರಸ್ ರೋಗಿಗಳ ಮೇಲೆ ಹೆಚ್ಚುವರಿ ಥೆರಪಿ ಹಾಗೂ ಮಾನದಂಡನಾತ್ಮಕ ಶುಶ್ರೂಷೆಯಲ್ಲಿ ಈ ನಾಲ್ಕು ಔಷಧ ಸಂಯೋಜನೆಗಳನ್ನು ಪರೀಕ್ಷಿಸಲಾಗವುದು. ಅಶ್ವಗಂಧ, ಯಷ್ಟಿಮಧು ಹಾಗೂ ಗುಡುಚಿ+ಪಿಪ್ಪಲಿ (ಗಿಲೋಯ್) ಹಾಗೂ ಮಲೇರಿಯಾ ರೋಗದ ಚಿಕಿತ್ಸೆಗಾಗಿ ಸಂಶೋಧಿಸಲಾದ ಆಯುಷ್-64 ಹೀಗೆ ನಾಲ್ಕು ಬಗೆಯ ಔಷಧ ಸಂಯೋಜನೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ಬಳಸಲಾಗುವುದೆಂದು ಕೊಟೇಚಾ ತಿಳಿಸಿದ್ದಾರೆ.
ಕೋವಿಡ್19 ಚಿಕಿತ್ಸೆಗೆ ನಾಲ್ಕು ವಿಭಿನ್ನ ಔಷಧ ಸಂಯೋಜನೆಗಳನ್ನು ರೂಪಿಸಲು ಸಿಎಸ್‌ಐಆರ್ ಹಾಗೂ ಆಯುಷ್ ಸಚಿವಾಲಯ ಪ್ರಯತ್ನಿಸಲಿದೆಯೆಂದು ಅವರು ಕೊಟೇಚಾ ಹೇಳಿದರು.
ಕೊರೋನಾ ಚಿಕಿತ್ಸೆಗಾಗಿ ಇಂದಿನಿಂದ ಆಯುಷ್ ಪ್ರಾಯೋಗಿಕ ಪರೀಕ್ಷೆ
Follow Us