ನವದೆಹಲಿ: ನಟ ಸುಶಾಂತ್ ಸಿಂಗ್ ಸಾವು ಬಾಲಿವುಡ್‍ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಒಂದೆಡೆ ನಟಿ ಕಂಗನಾ ರನಾವುತ್ ಬಾಲಿವುಡ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರೇ, ಇನ್ನೊಂದೆಡೆ ಬಾಲಿವುಡ್‍ನ ದ್ರೌಪದಿ ಖ್ಯಾತಿಯ ನಟಿ ರೂಪಾ ಗಂಗೂಲಿ ಸಂಸತ್ ಭವನದ ಎದುರು ಪ್ರತಿಭಟನೆಗೆ ಮುಂದಾಗಿದ್ದಾರೆ.
ನಟಿ ಹಾಗೂ ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿರುವ ಬಿಜೆಪಿಯ ರೂಪಾ ಗಂಗೂಲಿ, ಬಾಲಿವುಡ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ.
ಬಾಲಿವುಡ್ ನಟ-ನಟಿಯರನ್ನು ಸಾಯಿಸುತ್ತಿದೆ. ಡ್ರಗ್ ಅಡಿಕ್ಟ್‍ಗಳಾಗಿ ಮಾಡುತ್ತಿದೆ ಎಂದು ಆರೋಪಿಸಿದ ರೂಪಾ ಗಂಗೂಲಿ ಮೀಟೂ ಪ್ರಕರಣದಲ್ಲಿ ಆರೋಪಿಯಾಗಿರುವ ಅನುರಾಗ್ ಕಶ್ಯಪ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಟಿ ರೂಪಾ ಗಂಗೂಲಿ ಡಿಡಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಸೀರಿಯಲ್‍ನ ದ್ರೌಪದಿ ಪಾತ್ರದಲ್ಲಿ ಮಿಂಚಿದ್ದರು.
MP ರೂಪಾ ಗಂಗೂಲಿ ಏಕಾಂಗಿ ಪ್ರತಿಭಟನೆ
Follow Us