ಅಹಮದಾಬಾದ್: ಆಹಾರ ಮತ್ತು ನೀರಿಲ್ಲದೆ 70 ವರ್ಷಗಳಿಗೂ ಹೆಚ್ಚು ಕಾಲ ಬದುಕುಳಿದಿರುವುದಾಗಿ ಹೇಳಿಕೊಂಡಿದ್ದ ಪ್ರಹ್ಲಾದ್ ಜಾನಿ ಆಲಿಯಾಸ್ ಚುನ್ರಿವಾಲಾ ಮಾತಾಜಿ (90) ಮಂಗಳವಾರ ನಿಧನರಾದರು.
ಚುನ್ರಿವಾಲಾ ಗುಜರಾತ್ ಜಿಲ್ಲೆಯ ಗಾಂಧಿನಗರ ಜಿಲ್ಲೆಯ ಚರಾಡದಲ್ಲಿ ಕೊನೆಯುಸಿರೆಳೆದರು ಎಂದು ಅವರು ಶಿಷ್ಯರು ತಿಳಿಸಿದ್ದಾರೆ. ಜಾನಿ ಅವರ ಪಾರ್ಥಿವ ಶರೀರವನ್ನು ಬಾನಸ್ಕಾಂತಾ ಜಿಲ್ಲೆಯ ಅಂಬಾಜಿ ದೇವಾಲಯ ಬಳಿ ನಿರ್ಮಿಸಲಾಗಿರುವ ಆಶ್ರಮಕ್ಕೆ ಕೊಂಡೊಯ್ಯಲಾಗಿದೆ.
ಅನ್ನ, ನೀರು ಇಲ್ಲದೆ ಬದುಕುಳಿಯಬಹುದು ಎಂಬ ಯೋಗಿ ಹೇಳಿಕೆ ಸಾಕಷ್ಟು ಅಚ್ಚರಿ ಹುಟ್ಟಿಸಿತ್ತು. ವಿಜ್ಞಾನಿಗಳು ಈ ಬಗ್ಗೆ 2003 ಮತ್ತು 2010ರಲ್ಲಿ ಪರೀಕ್ಷೆ ಕೂಡ ನಡೆಸಿದ್ದರು.
ದೇವಿ ಅಂಬಾಬಾಯಿಯ ಮೇಲೆ ತುಂಬಾ ಭಕ್ತಿ ಹೊಂದಿದ್ದ ಜಾನಿ, ಎಲ್ಲಾ ಸಮಯದಲ್ಲಿ ಚುನರಿ(ಕೆಂಪು ಸೀರೆ) ಧರಿಸಿ ಮಹಿಳೆಯರಂತೆ ಬಧುಕುತ್ತಿದ್ದರು. ಇದಕ್ಕಾಗಿ ಅವರನ್ನು ಚುನರಿವಾಲಾ ಮಾತಾಜಿ ಎಂದೇ ಕರೆಯಲಾಗುತಿತ್ತು. 14ನೇ ವಯಸ್ಸಿನಿಂದಲೇ ಜಾನಿ ಆಹಾರ ಮತ್ತು ನೀರು ಕೂಡ ತ್ಯಜಿಸಿದ್ದರು ಎಂದು ಅವರ ಅನುಯಾಯಿಗಳು ಹೇಳುತ್ತಾರೆ.
ಅನ್ನ, ನೀರಿಲ್ಲದೆ ಜೀವಿಸಬಹುದೆಂದಿದ್ದ ಚುನ್ರಿವಾಲಾ ಮಾತಾಜಿ ಇನ್ನಿಲ್ಲ
Follow Us