newsics.com
ಏಪ್ರಿಲ್ 13ರಿಂದ ಪ್ರತಿ ಐದು ದಿನಗಳಿಗೊಮ್ಮೆ ಕೋವಿಡ್ ಡೇಟಾವನ್ನು ಬಿಡುಗಡೆ ಮಾಡುತ್ತಿರುವ ಕೇರಳ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿ ದಿನವೂ ಕೋವಿಡ್ ಡೇಟಾ ಬಿಡುಗಡೆ ಮಾಡುವಂತೆ ಹೇಳಿದೆ.
ದೈನಂದಿನ ಪ್ರಕರಣದ ವಿವರಗಳನ್ನು ಪ್ರತಿ ದಿನ ಬಿಡುಗಡೆ ಮಾಡುವುದು ಬಹು ಮುಖ್ಯ, ಪ್ರತಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಪೂರ್ಣ ತಿಳುವಳಿಕೆ ಸಿಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪತ್ರದಲ್ಲಿ ಹೇಳಿದೆ.