ಅಹಮದಾಬಾದ್: ಗುಜರಾತ್ ನ ವಡೋದರಾದಲ್ಲೂ ಓರ್ವ ಐಸಿಸ್ ಉಗ್ರನನ್ನು ಗುಜರಾತ್ ಎಟಿಎಸ್ ಬಂಧಿಸಿದ್ದಾರೆ.
ಗುಜರಾತ್ ಪೊಲೀಸ್ನ ಆ್ಯಂಟಿ ಟೆರರಿಸಂ ಸ್ಕ್ವಾಡ್ ಐಸಿಸ್ ಉಗ್ರನನ್ನು ಬಂಧಿಸಿದ್ದು, ಆತನನ್ನು ಜಾಫರ್ ಅಲಿ ಎಂದು ಗುರುತಿಸಲಾಗಿದೆ. ವಡೋದರಾದ ಗೊರ್ವಾ ಎಂಬಲ್ಲಿ ಉಗ್ರನನ್ನು ಬಂಧಿಸಲಾಗಿದೆ. ಜಾಫರ್ ಅಲಿ ತಮಿಳುನಾಡಿನಲ್ಲಿ ಉಗ್ರ ಕೃತ್ಯಗಳಿಗೆ ಸಂಬಂಧಿಸಿ ಬೇಕಾದ ಆರೋಪಿಯಾಗಿದ್ದ. ಈತ ದೇಶಾದ್ಯಂತ ಐಸಿಸ್ ಟೆರರಿಸ್ಟ್ ಮಾಡ್ಯೂಲ್ ಸ್ಥಾಪಿಸುವ ಕೆಲಸ ಮಾಡುತ್ತಿದ್ದ.
ದೆಹಲಿಯಲ್ಲೂ ಮೂವರು ಉಗ್ರರನ್ನು ಬಂಧಿಸಿರುವ ಬೆನ್ನಲ್ಲೇ ಜಾಫರ್ ಅಲಿಯನ್ನೂ ಬಂಧಿಸಲಾಗಿದೆ.