ಗುವಾಹಟಿ: ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಮೂರನೇ ಆವೃತ್ತಿ ಶುಕ್ರವಾರ ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ವರ್ಣರಂಜಿತ ಉದ್ಘಾಟನೆಗೊಂಡಿತು.
ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಮೂರನೇ ಆವೃತ್ತಿಯನ್ನು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ
ಸೋನೊವಾಲ್ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಉದ್ಘಾಟಿಸಿದರು. ಅಸ್ಸಾಂನ ಹೆಮ್ಮೆಯ
ಕ್ರೀಡಾಪಟು, ಹೀಮಾ ದಾಸ್, ಈ ಆಟಗಳ ಟಾರ್ಚ್ ಬೆಳಗಿಸಿದರು.
ಈ ಪಂದ್ಯಗಳಲ್ಲಿ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು
6,800 ಆಟಗಾರರು 20 ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.