ನವದೆಹಲಿ: ಗೂಗಲ್’ನಲ್ಲಿ ನಿಮ್ಮ ಹತ್ತಿರದ ಹೋಟೆಲ್, ರೆಸ್ಟೊರೆಂಟ್, ಆಸ್ಪತ್ರೆ, ಮಾಲ್ಗಳನ್ನು ಹುಡುಕುವಂತೆ ಇನ್ಮುಂದೆ ಕೊರೋನಾ ಪರೀಕ್ಷಾ ಕೇಂದ್ರದ ಬಗ್ಗೆಯೂ ತಿಳಿಯಬಹುದು.
ಇಂತಹದೊಂದು ಹೊಸ ಫೀಚರ್ ಅನ್ನು ಜಗತ್ತಿನ ನಂಬರ್ ಒನ್ ಸರ್ಚ್ ಎಂಜಿನ್ ಗೂಗಲ್ ಪರಿಚಯಿಸಿದೆ. ಕೊರೊನಾ ಪರೀಕ್ಷಾ ಕೇಂದ್ರದ ಫೀಚರ್ ಕನ್ನಡ, ಇಂಗ್ಲೀಷ್, ಹಿಂದಿ, ಮಲಯಾಳಂ, ತಮಿಳು, ಗುಜರಾತಿ, ಬೆಂಗಾಳಿ, ಮರಾಠಿ ಭಾಷೆಗಳಲ್ಲಿ ಲಭ್ಯವಿದೆ.
ಗೂಗಲ್ ಮ್ಯಾಪ್, ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಸಂಯೋಜನೆಯೊಂದಿಗೆ ಈ ಹೊಸ ಫೀಚರ್ ಬಳಕೆದಾರರಿಗೆ ಲಭ್ಯವಿದೆ ಎಂದು ಗೂಗಲ್ ಮಾಹಿತಿ ನೀಡಿದೆ.
ಗೂಗಲ್ ಬಳಕೆದಾರರು ತಮ್ಮ ಹತ್ತಿರದ ಕೊವಿಡ್-19 ಪರೀಕ್ಷಾ ಕೇಂದ್ರಗಳನ್ನು ಹುಡುಕಬಹುದಾಗಿದೆ. ಈ ಫೀಚರ್ ಸರ್ಕಾರದಿಂದ ಅನುಮತಿ ಪಡೆದಿದೆ ಗೂಗಲ್ ತಿಳಿಸಿದೆ.
ಸುಮಾರು 700 ಕೊರೋನಾ ಪರೀಕ್ಷಾ ಕೇಂದ್ರಗಳು ಈಗಾಗಲೇ ಗೂಗಲ್ ಸರ್ಚ್ನಲ್ಲಿ ನೋಂದಣಿ ಮಾಡಲಾಗಿದೆ. ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್) My gov ಫ್ಲಾಟ್ ಫಾರ್ಮಿನೊಂದಿಗೆ ಜತೆಯಾಗಿ ಈ ಯೋಜನೆ ಜಾರಿ ಮಾಡಿದೆ ಎಂದು ಗೂಗಲ್ ತಿಳಿಸಿದೆ.
ಗೂಗಲ್’ನಲ್ಲೇ ಹತ್ತಿರದ ಕೊರೋನಾ ಸೆಂಟರ್ ಮಾಹಿತಿ!
Follow Us