ಮುಂಬೈಃ ಒಂದಲ್ಲ ಎರಡಲ್ಲ.. ಬರೋಬರಿ 168 ಕಿಲೋ ಈರುಳ್ಳಿ ಕದ್ದ ಕಳ್ಳರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಮುಂಬೈನ ಡೋಂಗ್ರಿ ಮಾರುಕಟ್ಟೆಯಲ್ಲಿ ಈ ಕಳ್ಳತನ ನಡೆದಿತ್ತು. 168 ಕಿಲೋ ಈರುಳ್ಳಿ ಮೌಲ್ಯ 20, 160 ರೂಪಾಯಿ ಎಂದು ಅಂದಾಜಿಸಲಾಗಿದೆ. ಈರುಳ್ಳಿಗೆ ಚಿನ್ನದ ಬೆಲೆ ಬಂದದ್ದೇ ಕಳ್ಳತನಕ್ಕೆ ಕಾರಣ ಎನ್ನಲಾಗಿದೆ