ಬೆಂಗಳೂರು: ಫಿಟ್ ಇಂಡಿಯಾ ದಿನದ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ದೇಶದ ನಾಗರೀಕರು ಹಾಗೂ ಫಿಟ್‍ನೆಸ್ ಐಕಾನ್‍ಗಳ ಜೊತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಫಿಟ್‍ನೆಸ್ ಇಂಡಿಯಾದ ಈ ಸಂವಾದದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ,ಓಟಗಾರ ಮಿಲಿಂದ್ ಸೋಮನ್,ನ್ಯೂಟ್ರಿಶಿಯನ್ ತಜ್ಞೆ ರುಜುತಾ ದಿವೇಕರ್ ಸೇರಿದಂತೆ ಹಲವು ಫಿಟ್‍ನೆಸ್ ಉತ್ತೇಜಕರು ಪಾಲ್ಗೊಳ್ಳಲಿದ್ದಾರೆ.
ಕೊರೋನಾ ಕಾಲದಲ್ಲಿ ಫಿಟ್‍ನೆಸ್ ತುಂಬಾ ಅಗತ್ಯವಾಗಿದೆ. ಹೀಗಾಗಿ ಈ ಸಂವಾದವು ಜನರಲ್ಲಿ ಪೌಷ್ಠಿಕಾಂಶ,ಆರೋಗ್ಯ,ಫಿಟನೆಸ್ ಸೇರಿದಂತೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.
ಅಲ್ಲದೇ ಆರೋಗ್ಯಪೂರ್ಣ ಜೀವನನ ಬಗ್ಗೆ ಪ್ರಧಾನಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ಫಿಟ್ ಇಂಡಿಯಾ ಸಂವಾದ ಸೆ.24 ರಂದು ಬೆಳಗ್ಗೆ 11.30 ಕ್ಕೆ ಆರಂಭವಾಗಲಿದ್ದು, ಆಸಕ್ತರು https://pmindawebcast.nic.inಲಿಂಕ್ ಮೂಲಕ ಸಂವಾದದಲ್ಲಿ ಪಾಲ್ಗೊಳ್ಳಬಹುದೆಂದು ಪ್ರಧಾನಿ ಕಚೇರಿ ಹೇಳಿದೆ.
ಸೆ. 24 ರಂದು ಫಿಟ್ ನೆಸ್ ಸಂವಾದದಲ್ಲಿ ಪ್ರಧಾನಿ ಮೋದಿ
Follow Us