newsics.com
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಗಾಳಿ ಹೊಲಸು ಎಂದು ಪುನರುಚ್ಚರಿಸಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಂತಿಮ ಚರ್ಚೆಯ ವೇಳೆ ಹವಾಮಾನ ಬದಲಾವಣೆ ಕುರಿತಂತೆ ಮಾತನಾಡುವಾಗ ಟ್ರಂಪ್ ಮತ್ತೊಮ್ಮೆ ಭಾರತದ ಗಾಳಿಯನ್ನು ‘ಹೊಲಸು’ ಎಂದು ಹೇಳಿದ್ದಾರೆ. ಚೀನಾವನ್ನ ನೋಡಿ, ಎಷ್ಟು ಕೊಳಕಾಗಿದೆ. ರಷ್ಯಾವನ್ನು ನೋಡಿ, ಭಾರತವನ್ನು ನೋಡಿ… ಗಾಳಿ ಕೊಳಕಾಗಿದೆ ಅಂತ ಟ್ರಂಪ್ ತಮ್ಮ ಮಾತಿನಲ್ಲಿ ಹೇಳಿದ್ದಾರೆ.
ಹವಾಮಾನ ಬದಲಾವಣೆಯನ್ನು ಹೇಗೆ ಎದುರಿಸಬಹುದು ಮತ್ತು ಉದ್ಯೋಗ ಬೆಳವಣಿಗೆಯನ್ನು ಬೆಂಬಲಿಸುವುದು ಹೇಗೆ ಎಂಬ ಚರ್ಚೆಯ ಮಾಡರೇಟರ್ ಕ್ರಿಸ್ಟನ್ ವೆಲ್ಕರ್ ಅವರ ಪ್ರಶ್ನೆಗೆ ಟ್ರಂಪ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸೆಪ್ಟೆಂಬರ್ 29ರಂದು ನಡೆದ ಮೊದಲ ಚರ್ಚೆಯ ವೇಳೆ ಟ್ರಂಪ್ ಅವರು ಚೀನಾ ಮತ್ತು ರಷ್ಯಾ ಜತೆ ಭಾರತವನ್ನು ಸೇರಿದಂತೆ ಈ ದೇಶಗಳು ಜಾಗತಿಕ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿವೆ ಎಂದು ಹೇಳಿದ್ದರು. ಅಮೆರಿಕವು ‘ಇಂಗಾಲ ಹೊರಸೂಸುವಿಕೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯನ್ನು ಹೊಂದಿದೆ’ ಎಂದೂ ಅವರು ಹೇಳಿದ್ದಾರೆ.
ಕೊರೋನಾಗೆ ಲಸಿಕೆ ಸಿದ್ಧ ಎಂದ ಟ್ರಂಪ್
ರಾಜ್ಯಕ್ಕೊಂದೇ ಸಹಾಯವಾಣಿ; ಎಲ್ಲ ತುರ್ತು ಸೇವೆಗಳಿಗೆ 112 ಕ್ಕೆ ಕರೆಮಾಡಿ
ರಾಜ್ಯದಲ್ಲಿ ನ.17ರಿಂದ ಪದವಿ ಕಾಲೇಜು ಆರಂಭ
ಕಪಿಲ್’ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು